5 ಕೋಟಿಗೂ ಅಕ ಉದ್ಯೋಗ ಸೃಷ್ಟಿ: ಗಡ್ಕರಿ

ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ವಲಯದಲ್ಲೇ (ಎಂಎಸ್‍ಎಂಇ)5 ಕೋಟಿಗೂ ಅಕ ಉದ್ಯೋಗಾವಾಶ ಸೃಷ್ಟಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಸಣ್ಣ ಮಧ್ಯಮ ಉದ್ಯಮ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
2020ರ ಹೊರಾಸಿಸ್ ಏಷ್ಯಾ ಆನ್‍ಲೈನ್ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಎಂಎಸ್‍ಎಂಇ ವಲಯಕ್ಕೆ ಒತ್ತು ನೀಡುತ್ತಿದ್ದು, ಮುಂದಿನ ಕೆಲ ವರ್ಷದಲ್ಲಿ ಭಾರತ ವಿಶ್ವದಲ್ಲೇ ಅಗ್ರ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಲಿದೆ ಎಂದು ಹೇಳಿದ್ದಾರೆ. ಚೀನಾಕ್ಕೆ ಹೋಲಿಸಿದರೆ, ಭಾರತವೇ ಹೆಚ್ಚಿನ ಸಾಮಥ್ರ್ಯ ಹೊಂದಿದೆ. ಭಾರತದಲ್ಲಿ ಯುವ ಸಂಪನ್ಮೂಲ ಜಾಸ್ತಿಯಿದ್ದು, ಕೇಂದ್ರದ ವಿವಿಧ ನೀತಿಗಳಿಂದ ಭಾರತದಲ್ಲಿ ಹೂಡಲು ವಿದೇಶಗಳು ಆಸಕ್ತಿ ತೋರುತ್ತಿವೆ ಎಂದು ತಿಳಿಸಿದ್ದಾರೆ.
ಸದ್ಯ ದೇಶದ ಆರ್ಥಿಕತೆಯಲ್ಲಿ ಸಣ್ಣ – ಮಧ್ಯಮ ಉದ್ಯಮದ ಪಾಲು ಶೇ.30 ಇದ್ದು, ಈ ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ