ಬೇಗ್ ಜಯದೇವ ಆಸ್ಪತ್ರೆಗೆ ದಾಖಲು

ಬೆಂಗಳೂರು: ಐಎಂಎ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ರೋಷನ್‍ಬೇಗ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗೆಂದು ಜಯದೇವ ಆಸ್ಪತ್ರೆಗೆ ದಾಖಲಾಗುವಂತಾಗಿದೆ.
ಇತ್ತೀಚೆಗಷ್ಟೆ ಬೇಗ್ ಹೃದಯ ಸಂಬಂ ಆ್ಯಂಜಿಯೋಗ್ರಾಂ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲದೆ ಬಂಧನವಾದ ಒಂದೆರಡು ದಿನದಲ್ಲಿಯೇ ಆರೋಗ್ಯ ಸಮಸ್ಯೆ ಕಂಡುಬಂದು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮತ್ತೆ ಜೈಲಿಗೆ ಕರೆದೊಯ್ಯಲಾಗಿತ್ತು.
ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿರುವ ಜಯದೇವ ಆಸ್ಪತ್ರೆ ವೈದ್ಯರು, ಈ ಹಿಂದೆ ರೋಷನ್ ಬೇಗ್ ಆ್ಯಂಜಿಯೋಗ್ರಾಂ ಚಿಕಿತ್ಸೆ ಮಾಡಿಸಿದ್ದ ಖಾಸಗಿ ಆಸ್ಪತ್ರೆ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ್ದಾರೆ. ಆರೋಪಿಯನ್ನು ನ.28ರವರೆಗೆ ಸಿಬಿಐ ಬಂಧನದಲ್ಲಿಡಲು ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಮಧ್ಯೆ ಜಾಮೀನು ಕೋರಿ ಬೇಗ್ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಪೆÇಲೀಸರು ಆಕ್ಷೇಪಣೆ ಸಲ್ಲಿಸಬೇಕಿದೆ. ಆರೋಪಿಯ ಸಿಬಿಐ ಬಂಧನದ ಅವ ನ.28ಕ್ಕೆ ಮುಗಿಯಲಿದ್ದು, ಅಂದು ವಿಶೇಷ ನ್ಯಾಯಾಲಯ ಮತ್ತೊಂದು ಆದೇಶವನ್ನು ಹೊರಡಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ