ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನಕುಮಾರ ಕಟೀಲ್ ಗುರಿ, ದಾರಿ ಮರೆತಿರುವ ಕಾಂಗ್ರೆಸ್ ಅವನತಿಯತ್ತ

ದಾವಣಗೆರೆ: ಗುರಿ, ದಾರಿ ಮರೆತಿರುವ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಸ್ಪಷ್ಟ ಗುರಿಯೊಂದಿಗೆ ಸರಿಯಾದ ದಾರಿಯಲ್ಲಿ ಸಾಗುತ್ತಿರುವ ಬಿಜೆಪಿ, ಭಾರತವನ್ನು ವಿಶ್ವಗುರುವಾಗಿಸುವತ್ತ ಮುಂದಡಿ ಇಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನಕುಮಾರ ಕಟೀಲ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಹೋಟೆಲ್ ಅಪೂರ್ವ ರೆಸಾರ್ಟ್‍ನಲ್ಲಿ ಮಂಗಳವಾರ ರಾಜ್ಯ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹಸಂಚಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಕಾರಕ್ಕಾಗಿ ಗರೀಬಿ ಹಠಾವೊ, ಪಂಚ ವಾರ್ಷಿಕ ಯೋಜನೆ, 20 ಅಂಶಗಳ ಕಾರ್ಯಕ್ರಮ ಹೀಗೆ ನಾನಾ ಭರವಸೆ ಕೊಟ್ಟಿತು. ಆದರೆ ಅಕಾರ ಸಿಕ್ಕಾಗ ಭ್ರಷ್ಟಾಚಾರ ಮಾಡಿದರು, ತಮ್ಮ ಕುಟುಂಬ ಬೆಳೆಸಿದರು, ಕಾರ್ಯಕರ್ತರನ್ನು ಮರೆತರು. ಕಾಂಗ್ರೆಸ್ ಗುರಿ ಅಕಾರ ಪಡೆಯುವುದು, ಅನುಭವಿಸುವುದು ಎಂದು ವಾಗ್ದಾಳಿ ನಡೆಸಿದರು.
ಇಂದಿರಾ ಗಾಂ ಕಾಲದಲ್ಲಿ ದೇಶದಲ್ಲಿ 1800 ಜನ ಕಾಂಗ್ರೆಸ್ ಶಾಸಕರಿದ್ದರು. ಲೈಟ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಮಾತಿತ್ತು. ಅಂತಹ ಪಕ್ಷಕ್ಕೆ ಇಂದು ವಿರೋಧ ಪಕ್ಷವಾಗಲು ಬೇಕಾದ 40 ಸಂಸದರನ್ನು ಗೆಲ್ಲಿಸಿಕೊಳ್ಳುವುದೂ ಕಷ್ಟವಾಗಿದೆ. ಗುರಿ, ದಾರಿಯನ್ನು ಮರೆತಿದ್ದೇ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದೆ ಎಂದು ಟೀಕಿಸಿದರು.
ಬಿಜೆಪಿ ಅಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ಜಗದ್ವಂದ್ಯ ಭಾರತ ನಿರ್ಮಾಣವೇ ನಮ್ಮ ಗುರಿ. ಅದನ್ನು ಸಾಸುವ ಸಲುವಾಗಿ ರಾಜಕೀಯದಲ್ಲಿದ್ದೇವೆ. ರಾಜಕಾರಣ ಎಂಬುದು ನಮ್ಮ ಗುರಿ ತಲುಪುವ ಸಾಧನವೇ ಹೊರತು ಅಕಾರವಲ್ಲ. ಬಿಜೆಪಿ ಸಾಮಾಜಿಕ ಪರಿವರ್ತನೆಯಲ್ಲಿ ನಂಬಿಕೆ ಇಟ್ಟಿದ್ದು, ಇದೇ ಕಾರಣಕ್ಕೆ ವಿಭಿನ್ನ, ವಿಶಿಷ್ಟ ಪಕ್ಷವಾಗಿದೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಶ್ರೇಷ್ಠವೆಂಬುದು ಬಿಜೆಪಿ ನಂಬಿಕೆಯಾಗಿದೆ. ಇದೇ ಕಾರಣಕ್ಕೆ ಬಿಜೆಪಿ ಬೆಳೆದಿದೆ ಎಂದರು.
ದೀರ್ಘಕಾಲ ಅಕಾರ ಸಿಗದಿದ್ದರೂ ನಾವು ಗುರಿ ಮರೆಯಲಿಲ್ಲ. ಅಕಾರವಿರಲಿ, ಇಲ್ಲದಿರಲಿ ನಾವು ಗುರಿ ಮರೆಯದೆ ಸರಿಯಾದ ದಾರಿಯಲ್ಲಿ ಮುನ್ನಡೆದಿದ್ದೇವೆ. ದೀನದಯಾಳ್ ಉಪಾಧ್ಯಾಯರ ಅಂತ್ಯೋದಯ, ಏಕಾತ್ಮತಾವಾದವನ್ನು ಅಳವಡಿಸಿಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಮಿಷನ್, ಆಯುಷ್ಮಾನ್ ಭಾರತ್, ದೀನದಯಾಳ್ ವಿದ್ಯುತ್ ಯೋಜನೆ, ಉಜ್ವಲಾ ಮುಂತಾದ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ನಾವು ಹೇಳುವ ವಿಚಾರಗಳನ್ನು ಖಂಡಿತ ಅನುಷ್ಠಾನಕ್ಕೆ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.
ನೆಹರು ಚಿಂತನೆ ವಿರೋಸಿ ಶ್ಯಾಮಪ್ರಸಾದ್ ಮುಖರ್ಜಿ ಕಾಂಗ್ರೆಸ್‍ನಿಂದ ಹೊರಬಂದಿದ್ದರು. ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ಸಿನ ಇಬ್ಬಗೆ ನೀತಿಯಿಂದ ಮುಖರ್ಜಿ ಬಲಿದಾನವಾಯಿತು. ಇದೀಗ ಕೇಂದ್ರದಲ್ಲಿ ಬಹುಮತ ಸರ್ಕಾರ ರಚಿಸಿ 371ನೇ ವಿ ರದ್ದುಪಡಿಸುವ ಮೂಲಕ ಕಾಶ್ಮೀರವನ್ನು ಸ್ವತಂತ್ರಗೊಳಿಸಿದ್ದೇವೆ. ದಶಕಗಳೇ ಕಳೆದರೂ ಬಿಜೆಪಿ ಎಂದಿಗೂ ತನ್ನ ಗುರಿಯಿಂದ ವಿಚಲಿತವಾಗುವುದಿಲ್ಲ ಎಂದರು.
ಪಕ್ಷದ ವಿಚಾರಗಳು ಸರ್ವವ್ಯಾಪಿ, ಸರ್ವಸ್ಪರ್ಶಿ ಆಗಬೇಕು. ಎಲ್ಲರಿಗೂ ನಮ್ಮ ವಿಚಾರ ಮುಟ್ಟಿಸಬೇಕು. ಈ ಕಾರಣಕ್ಕೆ ಸಮಾಜದ ಹಲವು ವರ್ಗ, ಸ್ತರ, ವೃತ್ತಿಗಳ ಜನರನ್ನು ಜೋಡಿಸುವ ಸಲುವಾಗಿ ಉದ್ಯಮಶೀಲರು, ವೈದ್ಯರು, ವಕೀಲರು, ಶಿಕ್ಷಕರು ಹೀಗೆ ಹತ್ತಾರು ಪ್ರಕೋಷ್ಠಗಳನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ ಹುಟ್ಟಿಕೊಂಡ ಈ ಪರಿಕಲ್ಪನೆ ಇದೀಗ ರಾಷ್ಟ್ರವ್ಯಾಪಿ ಜಾರಿಯಾಗುತ್ತಿದೆ ಎಂದು ತಿಳಿಸಿದರು.
ರಾಜಕಾರಣದ ಜೊತೆಗೆ ಸಮಾಜಸೇವೆಯೂ ಮುಖ್ಯ. ಜನರ ಸಂಕಷ್ಟಗಳಿಗೆ ಧ್ವನಿಯಾಗದವರು ಒಳ್ಳೆಯ ರಾಜಕಾರಣಿಯಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪ್ರತಿಭೆ, ಕೌಶಲ್ಯ ಬಳಸಿಕೊಂಡು ರಾಜಕಾರಣದಲ್ಲಿ ಬೆಳೆಯಬೇಕು. ಪ್ರಕೋಷ್ಠಗಳ ಮೂಲಕ 90 ಸಾವಿರ ಕಾರ್ಯಕರ್ತರಿಗೆ ಜವಾಬ್ದಾರಿ ಸಿಗಲಿದೆ. ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಚಿಂತನೆಯಡಿ ತಂತಮ್ಮ ಕ್ಷೇತ್ರಗಳಲ್ಲಿ ಆತ್ಮನಿರ್ಭರತೆಯನ್ನು ಜಾರಿಗೆ ತರಲು ಇಂದಿನ ಸಭೆ ಮಹತ್ವದ್ದಾಗಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಸಭೆಯ ಉದ್ಘಾಟನೆ ನೆರವೇರಿಸಿದರು. ಪ್ರಕೋಷ್ಠಗಳ ಸಂಚಾಲಕ ಎಂ.ಬಿ. ಭಾನುಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ, ಶಾಸಕರಾದ ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರ, ಮಾಡಾಳ್ ವಿರೂಪಾಕ್ಷಪ್ಪ, ಮೇಯರ್ ಬಿ.ಜಿ. ಅಜಯಕುಮಾರ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ