ಇಂದು ಸಿಎಂ ನೇತೃತ್ವದಲ್ಲಿ ಸಭೆ | ಮರು ಆರಂಭದ ಸುತ್ತ ಅನುಮಾನದ ಹುತ್ತ ! ಶಾಲೆ ಆರಂಭವಾಗುತ್ತಾ ?

ಬೆಂಗಳೂರು: ಕೊರೋನಾ ಸೋಂಕಿನ ಭೀತಿಯಿಂದ ಸಂಪೂರ್ಣವಾಗಿ ಪಾರಾಗದಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆಗಳ ಮರು ಆರಂಭ ಇನ್ನೂ ಅನುಮಾನವಾಗಿಯೇ ಇದೆ.
ಮಹಾಮಾರಿ ಸೋಂಕಿನ ಎರಡನೆ ಸುತ್ತು ಶುರುವಾಗಿದ್ದು, ಇಂತಹ ಸನ್ನಿವೇಶದಲ್ಲಿ ಶಾಲೆಗಳನ್ನು ಆರಂಭಿಸುವುದು ಸರಿಯೇ ಎಂಬ ಪ್ರಶ್ನೆ ಪ್ರಾಥಮಿಕ ಶಿಕ್ಷಣ ಇಲಾಖೆ ಅಕಾರಿಗಳನ್ನು ಬಲವಾಗಿ ಕಾಡಿದೆ.
ಸೋಮವಾರದಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಇತರೆ ಇಲಾಖೆಗಳ ಅಕಾರಿಗಳ ಸಭೆಯೊಂದು ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ಕೊರೋನಾ ಪರಿಸ್ಥಿತಿ ಹಾಗೂ ತಾಜಾ ವಿದ್ಯಮಾನಗಳ ಪರಾಮರ್ಶೆಯಾಗಲಿದೆ.
ಶಿಕ್ಷಣ ಇಲಾಖೆ ಅಲ್ಲದೆ ಆರೋಗ್ಯ, ಸಮಾಜ ಕಲ್ಯಾಣ , ಸಾರಿಗೆ ಇಲಾಖೆಗಳ ಪ್ರಮುಖ ಅಕಾರಿಗಳೂ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಶಾಲೆ ಆರಂಭಕ್ಕೆ ಆದೇಶಿಸಲಾದ ಇತರೆ ರಾಜ್ಯಗಳ ಸದ್ಯದ ಪರಿಸ್ಥಿತಿಯನ್ನೂ ಅವಲೋಕಿಸಲಾಗುತ್ತದೆ.
ವಿದ್ಯಾರ್ಥಿಗಳು ಬರುವುದು ಅನುಮಾನ..!
ರಾಜ್ಯದಲ್ಲಿ ಶಾಲೆಗಳು ಆರಂಭವಾದರೆ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡುವುದು ಬಹುತೇಕ ಅನುಮಾನ ಎಂಬ ಅಭಿಪ್ರಾಯ ಅಕಾರವರ್ಗದಿಂದ ಕೇಳಿ ಬರುತ್ತಿದೆ. ಪದವಿ ಕಾಲೇಜುಗಳ ಆರಂಭಕ್ಕೆ ರಾಜ್ಯದಲ್ಲಿ ಸಿಕ್ಕ ಪ್ರತಿಕ್ರಿಯೆ ಇಲ್ಲಿಯೂ ಸಿಕ್ಕರೆ ಶಾಲಾ ಆರಂಭ ಕಷ್ಟಕರ. ಅಲ್ಲದೇ ಈಗಾಗಲೇ ರಾಜ್ಯಾದ್ಯಂದ 130 ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕಿರುವುದು ಶಾಲಾ ಮಕ್ಕಳ ಪೊಷಕರಲ್ಲಿಯೂ ಆತಂಕ ಹೆಚ್ಚು ಮಾಡಿದೆ. ಅಲ್ಲದೇ ಶೈಕ್ಷಣಿಕ ವರ್ಷದ ಮುಕ್ಕಾಲು ಭಾಗ ಕಳೆದು ಹೋಗಿದ್ದು ಚಳಿಗಾಲದಲ್ಲಿ ಸೋಂಕು ಹೆಚ್ಚಾಗುವ ಸಂಭವವೂ ಇರುವುದರಿಂದ ಶಾಲೆ ಆರಂಭ ಮಾಡಿದರೆ ವಿದ್ಯಾರ್ಥಿಗಳನ್ನು ಕಳುಹಿಸಲು ಪೊಷಕರೂ ಮನಸ್ಸು ಮಾಡುತ್ತಿಲ್ಲ ಎಂಬ ವರದಿಯನ್ನೂ ಅಕಾರಿಗಳು ಸೋಮವಾರ ಸರ್ಕಾರದ ಮುಂದಿಡುವ ಸಾಧ್ಯತೆ ಇದೆ.

ಈಗಾಗಲೇ ಪೊಷಕರು, ಖಾಸಗಿ ಶಿಕ್ಷಣ ಸಂಸ್ಥೆಗಳು, ಶಾಲಾಭಿವೃದ್ಧಿ ಮಂಡಳಿ ಸದಸ್ಯರೊಂದಿಗೆ ಇಲಾಖೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದು ಈ ಕುರಿತ ಸಂಪೂರ್ಣ ವರದಿ ಶಿಕ್ಷಣ ಇಲಾಖೆಯ ಬಳಿಯಿದೆ. 9ನೇ ತರಗತಿಯಿಂದ 12ನೇ ತರಗತಿವರೆಗೆ ತರಗತಿಗಳನ್ನು ನಡೆಸಲು ಖಾಸಗಿ ಶಿಕ್ಷಣ ಸಂಸ್ಥೆಗಳು, ಶಾಲಾಭಿವೃದ್ದಿ ಮಂಡಳಿಯ ಸದಸ್ಯರು ಹಾಗೂ ಪೊಷಕರು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಗೊತ್ತಾಗಲಿದೆ.

ಇತರೆ ರಾಜ್ಯಗಳಲ್ಲೂ ಆರಂಭವಾಗದ ಶಾಲೆ ತಮಿಳುನಾಡು, ಆಂದ್ರಪ್ರದೇಶ, ಹರಿಯಾಣ, ಗುಜರಾತ್, ರಾಜ್ಯಗಳಲ್ಲಿ ಆರಂಭವಾಗಿದ್ದ ಶಾಲೆಗಳು ಮತ್ತೆ ಬಾಗಿಲು ಹಾಕಿದ್ದು ಈ ಪೈಕಿ ಕೆಲವು ರಾಜ್ಯಗಳು ಸದ್ಯಕ್ಕೆ ಶಾಲೆ ಆರಂಭ ಒಳಿತಲ್ಲ ಎಂಬ ಅಭಿಪ್ರಾಯವೂ ಇದೆ. ಹೀಗಿರುವಾಗ ಕರ್ನಾಟಕದಲ್ಲಿ ಶಾಲೆ ಆರಂಭಿಸುವುದು ಹೇಗೆ? ಯಾವ ಮುಂಜಾಗ್ರತೆ ಕ್ರಮ ಕೈಗೊಂಡರೆ ಉತ್ತಮ ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವುದರ ಜೊತೆಗೆ ತಜ್ಞರ ಸಲಹೆಗಳನ್ನೂ ಕೇಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ