ಅನ್ನಪೂರ್ಣ ದೇವಿ ವಿಗ್ರಹ ಭಾರತಕ್ಕೆ ಮರಳಿಸಿದ ಕೆನಡಾ

ಹೊಸದಿಲ್ಲಿ: 18ನೇ ಶತಮಾನದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕೆನಡಾವು ಭಾರತಕ್ಕೆ ಮರಳಿಸಿದೆ. ಕಳೆದ ಶತಮಾನಕ್ಕೂ ಹಿಂದೆ ಈ ವಿಗ್ರಹವನ್ನು ಕಳವು ಮಾಡಿ ಕೆನಡಾಗೆ ಸಾಗಿಸಲಾಗಿತ್ತು. ಈ ವಿಗ್ರಹವು ವಾರಣಾಸಿಯದ್ದು ಎಂದು ತಿಳಿಯಲಾಗಿದ್ದು, ರಾಗಿನಾ ವಿಶ್ವವಿದ್ಯಾಲಯದ ಸಂಗ್ರಹಾಲಯ ಮೆಕ್ಕಿನಂಝಿ ಆರ್ಟ್ ಗ್ಯಾಲರಿಯಲ್ಲಿತ್ತು.
ರಾಗಿನಾ ವಿಶ್ವವಿದ್ಯಾಲಯದ ಕುಲಪತಿ ಥಾಮಸ್ ಛೇಸೆ ಅವರು ಒಟ್ಟಾವಾದಲ್ಲಿನ ಭಾರತೀಯ ಹೈಕಮೀಶನರ್ ಅಜಯ್ ಬಿಸಾರಿಯಾ ಅವರಿಗೆ ವರ್ಚುವಲ್ ವಾಪಸಾತಿ ಕಾರ್ಯಕ್ರಮದ ಮೂಲಕ ನೀಡಿದ್ದಾರೆ.
ವಿಗ್ರಹವು ನಾರ್ಮನ್ ಮೆಕ್ಕಿಂಝಿಯ 1936ರ ಆಸ್ತಿಪತ್ರದಲ್ಲಿ ಈ ವಿಗ್ರಹದ ಉಲ್ಲೇಖವಿದೆ. ಗ್ಯಾಲರಿಯ ವಸ್ತುಗಳ ಕುರಿತ ಮುಂದಿನ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಕಲಾವಿದೆ ದಿವ್ಯಾ ಮೆಹ್ರಾ ಅವರು ಈ ವಿಗ್ರಹವನ್ನು ಗಮನಿಸಿದರು ಎಂದು ರಾಗಿನಾ ವಿಶ್ವವಿದ್ಯಾಲಯದ ಹೇಳಿಕೆ ತಿಳಿಸಿದೆ.
ಶತಮಾನದ ಹಿಂದೆ ಈ ವಿಗ್ರಹವನ್ನು ನ್ಯಾಯಬಾಹಿರವಾಗಿ ಮೆಕ್ಕಿನಂಝಿ ಸಂಗ್ರಹದಲ್ಲಿ ಸೇರಿಸಲಾಗಿದೆ ಎಂದು ಕಲಾವಿದೆ ದಿವ್ಯಾ ಮೆಹ್ರಾ ಗಮನಕ್ಕೆ ತಂದರು.
ಪೆಬೊಡಿ ಎಸ್ಸೆಕ್ಸ್ ಮ್ಯೂಸಿಯಂನ ಭಾರತ ಮತ್ತು ದಕ್ಷಿಣ ಏಷ್ಯಾ ಕಲಾ ವಿಭಾಗದ ಕ್ಯೂರೇಟರ್ ಡಾ. ಸಿದ್ಧಾರ್ಥ ವಿ. ಷಾ ಅವರು, ವಿಗ್ರಹ ದ ದೈಹಿಕ ಗುಣಲಕ್ಷಣ ವಿವರಿಸಿ ಅನ್ನಪೂರ್ಣ ವಿಗ್ರಹವೆಂದು ಗುರುತಿಸಿದರು. ದೇವಿಯು ಒಂದು ಕೈಯಲ್ಲಿ ಪಾಯಸದ ಬಟ್ಟಲನ್ನು , ಇನ್ನೊಂದು ಕೈಯಲ್ಲಿ ಚಮಚವನ್ನು ಹಿಡಿದಿದ್ದಾಳೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ