ಸಂಪತ್‍ರಾಜ್ ಡಿಕೆಶಿ ರಕ್ಷಣೆ ನೀಡಿದ್ದರೇ?

ಚಿಕ್ಕಮಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್‍ರಾಜ್ ಅವರಿಗೆ ಯಾರು ರಕ್ಷಣೆ ಕೊಟ್ಟಿದ್ದರು. ಎಲ್ಲಿ ತಲೆಮರೆಸಿಕೊಂಡಿದ್ದರು? ಡಿ.ಕೆ.ಶಿವಕುಮಾರ್ ರಕ್ಷಣೆ ಕೊಟ್ಟಿದ್ದರೆ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪತ್‍ರಾಜ್ ತಪ್ಪು ಮಾಡಿಲ್ಲದೆ ಇದ್ದಿದ್ದರೆ ಅವರೇಕೆ ತಲೆಮರೆಸಿಕೊಳ್ಳಬೇಕಿತ್ತು. ಈ ವಿಚಾರದಲ್ಲಿಪೊಲೀಸರು ಏಕಾಏಕಿ ಬಂಸಿರುವುದಲ್ಲ. ಆ ದಿನ ಅವರು ನಡೆಸಿದ ಸಂಭಾಷಣೆಗಳು ಸೇರಿದಂತೆ ಎಲ್ಲವನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ, ನಮ್ಮಪೊಲೀಸ್ ಇಲಾಖೆ ಸಮರ್ಥವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳು ಡಿ.ಕೆ.ಶಿವಕುಮಾರ್ ಕಡೆಯವರಾದರೂ, ಸಿದ್ದರಾಮಯ್ಯ ಕಡೆಯವರಾದರೂ ಬಿಡುವುದಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು.
ಅಕಸ್ಮಾತ್ ಬಿಜೆಪಿಯವರೇನಾದರೂ ಶಾಸಕನ ಮನೆಗೆ ಬೆಂಕಿ ಹಾಕಿದ್ದರೆ ರಾಹುಲ್ ಗಾಂ ಹಾಗೂ ಸೋನಿಯಾ ಗಾಂ ಇವರೆಲ್ಲರೂ ಇದೊಂದು ಅಂತಾರಾಷ್ಟ್ರೀಯ ಸುದ್ದಿಯಾಗುವಂತೆ ನೋಡಿಕೊಳ್ಳುತ್ತಿದ್ದರು. ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹುಶಃ ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಮುಂದೆಯೇ ಧರಣಿ ಕೂರುತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆ ಮೇಲೆ ಆಕಾಶ ಕಳಚಿ ಬಿದ್ದಂತೆ ವರ್ತಿಸುತ್ತಿದ್ದರು. ಈಗೇಕೆ ವõನವಾಗಿದ್ದಾರೆ. ಅವರ ಪಕ್ಷದವರೇ ಬೆಂಕಿ ಹಾಕಿದರೆ ಅದು ಸಹಿಸಿಕೊಳ್ಳುವ ಸಂಗತಿಯೇ? ಅಪರಾಗೆ ರಕ್ಷಣೆ ಕೊಡುವ ಮನಸ್ಥಿತಿ ಯಾರಿಗೂ ಒಳ್ಳೆಯದಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ