ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು 2020-21ರ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ. ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ಮಳೆ ಆಶ್ರಯದಲ್ಲಿ ಹುರುಳಿ ಬೆಳೆಯನ್ನು ವಿಮೆಗೆ ಒಳಪಡಿಸಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ವಿಸ್ತರಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ನೀರಾವರಿ ಆಶ್ರಿತ ಭತ್ತ, ಮುಸುಕಿನಜೋಳ, ರಾಗಿ ಹಾಗೂ ಮಳೆಯಾಶ್ರಿತ ಮುಸುಕಿನಜೋಳ, ರಾಗಿ ಹಾಗೂ ಪಾಳ್ಯ ಹೋಬಳಿಗೆ ನೀರಾವರಿ ಹಾಗೂ ಮಳೆಯಾಶ್ರಿತ ಮುಸುಕಿನಜೋಳ, ರಾಗಿಯನ್ನು ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ಒಳಪಡಿಸಲಾಗಿದೆ. ಹಿಂಗಾರು ಹಂಗಾಮಿಗೆ ನೀರಾವರಿ, ಮಳೆಯಾಶ್ರಿತ ಮುಸುಕಿನ ಜೋಳ, ಗುರಳಿ ಬೆಳೆಗೆ ವಿಮೆ ಕಂತು ಪಾವತಿಸಲು ನವೆಂಬರ್ 30 ಕಡೆಯ ದಿನವಾಗಿದೆ. ಮಳೆಯಾಶ್ರಿತ ರಾಗಿ, ಕಡಲೆಗೆ ಡಿಸೆಂಬರ್ 16, ನೀರಾವರಿ ಭತ್ತ, ರಾಗಿಗೆ ಡಿಸೆಂಬರ್ 31 ವಿಮಾ ಕಂತು ಪಾವತಿಸಲು ಕೊನೆಯ ದಿನವಾಗಿದೆ. ಬೇಸಿಗೆ ಹಂಗಾಮಿಗೆ ನೀರಾವರಿ ಆಶ್ರಿತ ಭತ್ತ ರಾಗಿಗೆ ವಿಮಾ ಕಂತು ಪಾವತಿಸಲು 2021ರ ಮಾರ್ಚ್ 1 ಕಡೆಯ ದಿನವಾಗಿದ್ದು, ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ ಎಂದು ಕೊಳ್ಳೇಗಾಲ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ