ನೋಟು ಅಮಾನ್ಯೀಕರಣದಿಂದ ಪಾರರ್ಶಕತೆಗೆ ಉತ್ತೇಜನ : ಮೋದಿ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡು ನಾಲ್ಕು ವರ್ಷ ಸಂಪೂರ್ಣಗೊಂಡಿದ್ದು, ಈ ನಿರ್ಣಯ ಪಾರದರ್ಶಕತೆಗೆ ಉತ್ತೇಜನ ನೀಡಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.

2016ರ ನವೆಂಬರ್ 8ರಂದು ಪ್ರಧಾನಿ ನೋಟುಗಳ ಅಮಾನ್ಯೀಕರಣ ಘೋಷಿಸಿದ್ದರು.

ಈ ಹಿನ್ನೆಲೆ ಭಾನುವಾರ ಪ್ರಧಾನಿ ಟ್ವೀಟ್ ಮಾಡಿ, ಕಪ್ಪುಹಣದ ಕಡಿವಾಡಣಕ್ಕೆ, ತೆರಿಗೆ ಅನುಸರಣೆÉ-ಸರಿಯಾದ ಪಾವತಿಗೆ ಮತ್ತು ಪಾರದರ್ಶಕತೆಗೆ ಅಂದಿನ ನಿರ್ಧಾರ ಉತ್ತೇಜನ ನೀಡಿದೆ. ಇದರ ಫಲಿತಾಂಶಗಳು ದೇಶದ ಪ್ರಗತಿಗೆ ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.

ಅಲ್ಲದೆ, ಟ್ವೀಟ್ ನೊಂದಿಗೆ ಗ್ರಾಫಿಕ್‍ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದು, ಉತ್ತಮ ತೆರಿಗೆ ಅನುಸರಣೆಯೊಂದಿಗೆ ಭಾರತ, ಕಡಿಮೆ ನಗದು ಆಧಾರಿತ ಆರ್ಥಿಕತೆಯಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ