ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿರುವ “ಕನ್ನಡ ಕಾಯಕ ವರ್ಷಾಚರಣೆ 2020 ರ ಲಾಂಛನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಇಂದು ವಿಧಾನಸೌಧದಲ್ಲಿ ಬಿಡುಗಡೆಗೊಳಿಸುವ ಮೂಲಕ ಕನ್ನಡ ಕಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಟಿ.ಎಸ್. ನಾಗಾಭರಣ, ಒಂದು ವರ್ಷ ಪೂರ್ತಿ ಅರ್ಥಪೂಣವಾಗಿ ಈ ಕಾರ್ಯಕ್ರಮ ಆಚರಿಸಲು ಹಲವು ಪ್ರತ್ಯೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದರು. ಸರ್ಕಾರಿ ಮುದ್ರಣಾಲಯ ಹಾಗೂ ಸರ್ಕಾರಿ ಇಲಾಖೆಗಳು ಮುದ್ರಿಸುವ ತಲೆಬರಹಗಳು ನಮೂನೆಗಳು, ಪೂರಕ ಸಾಮಗ್ರಿಗಳು, ಪ್ರಕಟಣೆಗಳು, ಜಾಹಿರಾತುಗಳಲ್ಲಿ ಕನ್ನಡ ಕಾಯಕ ವರ್ಷ ಲಾಂಛನವನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಹೊರರಾಜ್ಯ ಮತ್ತು ಹೊರದೇಶದ ಜನರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ “ಅಪಾರ್ಟ್‍ಮೆಂಟ್ ಗಳಲ್ಲಿ ಕನ್ನಡ ಕಲಿಕೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಒಟ್ಟಾರೆಯಾಗಿ ಕನ್ನಡ ಕಾಯಕ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಟಿಬದ್ಧವಾಗಿರುವುದಾಗಿ ಟಿ.ಎಸ್. ನಾಗಾಭರಣ ನುಡಿದರು
Related Articles
ಗೋಪಾಲನ ಊರಿನಲ್ಲಿ ಸಿಎಂರಿಂದ ಗೋಪೂಜೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ
January 19, 2021
Varta Mitra News - SP
ಉಡುಪಿ, ರಾಜ್ಯ, ರಾಜಕೀಯ, ಸಿಎಂ ಹೆಚ್ಡಿಕೆ
Comments Off on ಗೋಪಾಲನ ಊರಿನಲ್ಲಿ ಸಿಎಂರಿಂದ ಗೋಪೂಜೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿ
Seen By: 55 ಉಡುಪಿ: ರಾಜ್ಯ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಗೋಪಾಲನ ಊರು ಉಡುಪಿಯಲ್ಲಿ ಗೋಪೂಜೆ ಮಾಡುವ ಮೂಲಕ [more]
ಮುಂದಿನ 3 ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ
November 25, 2020
Varta Mitra News - SP
ರಾಜ್ಯ, ದಾವಣಗೆರೆ, ರಾಜಕೀಯ, ಸಿಎಂ ಹೆಚ್ಡಿಕೆ
Comments Off on ಮುಂದಿನ 3 ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ
Seen By: 66 ದಾವಣಗೆರೆ: ನಾಯಕತ್ವ ಬದಲಾವಣೆಯ ಯಾವುದೇ ವಿಚಾರವೂ ಪಕ್ಷದ ಮುಂದಿಲ್ಲ. ಮುಂದಿನ 3 ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು [more]
ಆಪರೇಶನ್ ಕಮಲ ಮಾಡುವುದಾಗಿ ನಾನು ಹೇಳಿಲ್ಲ, ನಮ್ಮ ನಾಯಕರೂ ಹೇಳಿಲ್ಲ: ಬಿಎಸ್ವೈ
December 27, 2018
Samachar Network-CLB
ರಾಜ್ಯ
Comments Off on ಆಪರೇಶನ್ ಕಮಲ ಮಾಡುವುದಾಗಿ ನಾನು ಹೇಳಿಲ್ಲ, ನಮ್ಮ ನಾಯಕರೂ ಹೇಳಿಲ್ಲ: ಬಿಎಸ್ವೈ
Seen By: 76 ವಿಜಯಪುರ: ಆಪರೇಷನ್ ಕಮಲ ಮಾಡುವುದಾಗಿ ನಾನು ಹೇಳಿಲ್ಲ. ನಮ್ಮ ನಾಯಕರೂ ಹೇಳಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕಚ್ಚಾಡಿಕೊಂಡು ಬಿದ್ದರೆ ಮುಂದೆ ಯೋಚಿಸುತ್ತೇವೆ ಎಂದು ಬಿಜೆಪಿ [more]