ಬಜೆಟ್‍ನಲ್ಲಿ ಘೋಷಿಸಿದ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರ್ಕಾರ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ಹಂತ ಹಂತವಾಗಿ ಬಜೆಟ್‍ನಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಹೇಳಿದರು. ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ ಈಗಾಗಲೇ 50 ಕೋಟಿ ರೂಪಾಯಿ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ, ಮಂಗಳೂರಿಗೆ ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆಯಡಿ 125 ಕೋಟಿ ರೂಪಾಯಿ ಒದಗಿಸಲಾಗುವುದು. ಮೀನುಗಾರಿಕೆ ಅಭಿವೃದ್ಧಿ, ಕರಾವಳಿ ಆಂತರಿಕ ಭದ್ರತೆಗೆ ಆದ್ಯತೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸರಕಾರ ವಿಶೇಷ ಗಮನ ನೀಡಿದೆ ಎಂದರು. ಪ್ರವಾಸೋದ್ಯಮ ಕ್ಷೇತ್ರ ಮುಂದಿನ 6 ತಿಂಗಳಲ್ಲಿ ಹೊಸ ಬದಲಾವಣೆ ಕಾಣಲಿದೆ, ಈ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆಗೆ ಪೆÇ್ರೀತ್ಸಾಹ ನೀಡಲಾಗುವುದು ಎಂದು ಅವರು ಹೇಳಿದರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರಿಗೆ ತಲಾ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ, ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ದೃಢ ಹೆಜ್ಜೆ ಇಡಲಾಗಿದೆ. ರಾಜ್ಯವನ್ನು ಡ್ರಗ್ಸ್ ಮುಕ್ತಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.
Related Articles
ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿತ: ಕೂದಲೆಳೆ ಅಂತರದಲ್ಲಿ ಪಾರಾದ ಎರಡು ಬಸ್ ಗಳು
June 26, 2018
Samachar Network-CLB
ಉತ್ತರ ಕನ್ನಡ, ಉಡುಪಿ, ರಾಜ್ಯ, ದಕ್ಷಿಣ ಕನ್ನಡ, ಕರಾವಳಿ
Comments Off on ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿತ: ಕೂದಲೆಳೆ ಅಂತರದಲ್ಲಿ ಪಾರಾದ ಎರಡು ಬಸ್ ಗಳು
Seen By: 356 ಮಂಗಳೂರು: ಜೂ-26: ಮಂಗಳೂರು ಗಡಿಭಾಗದ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಸೇತುವೆಯ ಮೇಲಿನಿಂದ ಸಾಗುತ್ತಿದ್ದ ಎರಡು ಖಾಸಗಿ ಕೂದಲೆಳೆ [more]
ವಿಶಿಷ್ಟಚೇತನ ಪ್ರತಿಭೆಗಳ ಪೊತ್ಸಾಹಕ್ಕಾಗಿ ನಿ ಸಂಗ್ರಹಣೆ ಕಾಶ್ಮೀರ -ಕನ್ಯಾಕುಮಾರಿ ಪ್ಯಾರಾ ಸೈಕ್ಲಿಂಗ್
December 28, 2020
Varta Mitra News - SP
ಬೆಂಗಳೂರು, ರಾಜ್ಯ, ರಾಷ್ಟ್ರೀಯ, ಕಾರ್ಯಕ್ರಮಗಳು
Comments Off on ವಿಶಿಷ್ಟಚೇತನ ಪ್ರತಿಭೆಗಳ ಪೊತ್ಸಾಹಕ್ಕಾಗಿ ನಿ ಸಂಗ್ರಹಣೆ ಕಾಶ್ಮೀರ -ಕನ್ಯಾಕುಮಾರಿ ಪ್ಯಾರಾ ಸೈಕ್ಲಿಂಗ್
Seen By: 66 ಬೆಂಗಳೂರು: ಇನಿನಿಟಿ 2020 ನಿ ಸಂಗ್ರಹಣೆಗಾಗಿ ಆದಿತ್ಯ ಮೆಹ್ತಾ ಫೌಂಡೇಶನ್ ಮತ್ತು ಬಾರ್ಡರ್ ಸೆಕ್ಯುರಿಟಿ ಪೊರ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ಯಾರಾ ಸೈಕ್ಲಿಂಗ್ ಯಾತ್ರೆಗೆ [more]
ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಣೆ
November 2, 2020
Varta Mitra News - SP
ಬೆಂಗಳೂರು, ರಾಜ್ಯ, ಸಿಎಂ ಹೆಚ್ಡಿಕೆ, ಕಾರ್ಯಕ್ರಮಗಳು
Comments Off on ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಣೆ
Seen By: 63 ಬೆಂಗಳೂರು: ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಿಸಲಾಗುತ್ತಿದ್ದು, ಶೀಘ್ರವೇ ಆಚರಣೆ ಕುರಿತ ರೂಪುರೇಷೆಗಳನ್ನು ಪ್ರಕಟ ಮಾಡಲಾಗುವುದು ಎಂದು ಮುಖ್ಯ ಮಂತ್ರಿ [more]