ಬಿಹಾರದ ಮೂರನೇ ಹಾಗೂ ಅಂತಿಮ ಹಂತದ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬಿದ್ದಿದೆ. ಈ ಹಂತದಲ್ಲಿ ಕಿಶನ್ ಗಂಜ್, ಕತಿಹಾರ್, ಮಾಧೇಪುರ, ಸುಪೌಲ್ ಸೇರಿದಂತೆ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ನಾಡಿದ್ದು, 7ರಂದು ಮತದಾನ ನಡೆಯಲಿದೆ. ಇದೇ ಅವಧಿಯಲ್ಲಿ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ಮತದಾನ ನಡೆಯಲಿದೆ. ಬಿಜೆಪಿ, ಆರ್‍ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ಕೊನೆಯ ಹಂತದ ಪ್ರಯತ್ನ ನಡೆಸಿದರು. ನಾಯಕರು ಸರಣಿ ಪ್ರಚಾರ ಸಭೆಗಳನ್ನು ನಡೆಸಿದರು. ರಾಷ್ಟ್ರೀಯ ಲೋಕ ಸಮತಾ ಪಾರ್ಟಿ-ಆರ್‍ಎಲ್‍ಎಸ್‍ಪಿ, ಹಿಂದೂಸ್ತಾನಿ ಅವಾಮ್ ಮೋರ್ಚಾ-ಎಚ್‍ಎಎಂ ಸೇರಿದಂತೆ ಎಡಪಕ್ಷಗಳು ಕೂಡ ರ್ಯಾಲಿ ಹಾಗೂ ರೋಡ್ ಶೋ ನಡೆಸಿದವು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಧುಬನಿಯಲ್ಲಿ ಎನ್‍ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ, ವಿರೋಧ ಪಕ್ಷಗಳಿಗೆ ಅಭಿವೃದ್ಧಿ ಕುರಿತು ಯಾವುದೇ ಕಾರ್ಯಸೂಚಿ ಇಲ್ಲ. ಅವರು ರಾಜ್ಯದ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಕಿಶನ್ ಗಂಜ್ ಮತ್ತು ಆರಾರಿಯಾಲ್ಲಿ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿ, ಇದು ಕೇವಲ ವಿಧಾನಸಭಾ ಚುನಾವಣೆಯಲ್ಲ, ನಿರುದ್ಯೋಗ ಹೋಗಲಾಡಿಸಲು ನಡೆಸುವ ಹೋರಾಟ ಎಂದು ಹೇಳಿದರು.
Related Articles
Seen By: 55 ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವುದು ಹೆಮ್ಮೆಯ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಬಿಹಾರದ ಜನತೆಗೆ [more]
ಉತ್ತರ ಪ್ರದೇಶದ ಗೋರಖ್ಪುರ, ಫುಲ್ಪುರ ಹಾಗೂ ಬಿಹಾರದಆರಿಯಾ ಕ್ಷೇತ್ರದಲ್ಲಿ ಮತದಾನ ಆರಂಭ: ಸಿಎಂ ಯೋಗಿ ಮತದಾನ
March 11, 2018
Samachar Network
ರಾಷ್ಟ್ರೀಯ
Comments Off on ಉತ್ತರ ಪ್ರದೇಶದ ಗೋರಖ್ಪುರ, ಫುಲ್ಪುರ ಹಾಗೂ ಬಿಹಾರದಆರಿಯಾ ಕ್ಷೇತ್ರದಲ್ಲಿ ಮತದಾನ ಆರಂಭ: ಸಿಎಂ ಯೋಗಿ ಮತದಾನ
Seen By: 53 ಲಖನೌ:ಮಾ-11: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪ್ರತಿನಿಧಿಸುತ್ತಿರುವ ಗೋರಖ್ಪುರ, ಫುಲ್ಪುರ ಲೋಕಸಭಾ [more]
ಬಿಹಾರ ಚುನಾವಣೆ | ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಭಾರತ್ ಮಾತಾ ಕೀ ಜೈ ಎನ್ನಲು ಬಿಡದವರಿಗೆ ಬೆಂಬಲ ನೀಡದಿರಿ
November 4, 2020
Varta Mitra News - RN
ರಾಷ್ಟ್ರೀಯ, ರಾಜಕೀಯ, ಪ್ರಧಾನಿ ಮೋದಿ
Comments Off on ಬಿಹಾರ ಚುನಾವಣೆ | ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಭಾರತ್ ಮಾತಾ ಕೀ ಜೈ ಎನ್ನಲು ಬಿಡದವರಿಗೆ ಬೆಂಬಲ ನೀಡದಿರಿ
Seen By: 41 ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಬೆನ್ನಲ್ಲೇ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಭಾರತ್ ಮಾತಾ [more]