ಅಮೆರಿಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಗೆ ಮತದಾನ ಪೂರ್ಣಗೊಂಡಿದ್ದು, ಇದೀಗ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ರಿಪಬ್ಲಿಕನ್ ಪಕ್ಷದ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಟ್ ಅಭ್ಯರ್ಥಿ ಜೋ ಬಿಡನ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಕೋವಿಡ್-19 ಸೋಂಕಿನ ನಡುವೆ ನಡೆದ ಅತ್ಯಂತ ದೊಡ್ಡ ಚುನಾವಣೆ ಇದಾಗಿದ್ದು, 74 ವರ್ಷದ ಡೋನಾಲ್ಡ್ ಟ್ರಂಪ್ ಹಾಗೂ 77 ವರ್ಷದ ಜೋ ಬಿಡನ್ ಭಾರೀ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಇಬ್ಬರು ನಾಯಕರ ನೀತಿ-ನಿಲುವುಗಳು ವಿಭಿನ್ನವಾಗಿದ್ದು, ಚುನಾವಣಾ ಪ್ರಚಾರದಲ್ಲೂ ಬಹಿರಂಗಗೊಂಡಿತ್ತು. ಇವರ ಗೆಲುವಿನ ಬಗ್ಗೆ ವಿವಿಧ ಮಾಧ್ಯಮಗಳ ಸಮೀಕ್ಷೆಗಳು ಮಿಶ್ರ ಪ್ರತಿಕ್ರಿಯೆ ನೀಡಿವೆ. ಡೋನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ತಮ್ಮದೇ ಗೆಲುವು ಎಂದು ಹೇಳಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ದೊಡ್ಡ ರಾಜ್ಯಗಳಾದ ಪ್ಲೋರಿಡಾ ಮತ್ತು ಅರಿಜೋನಾದಲ್ಲಿ ತಮಗೆ ಗೆಲುವು ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೋ ಬಿಡನ್, ಮಧ್ಯಮ ವರ್ಗದ ಜನ ರಾಷ್ಟ್ರ ನಿರ್ಮಾಣ ಮಾಡಿದ್ದು, ಅವರೇ ದೇಶದ ಬೆನ್ನಲುಬು. ತಮ್ಮನ್ನು ಎಲ್ಲರೂ ಬೆಂಬಲಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ