
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಠೇವಣಿಗಳ ಸೇವಾ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಬ್ಯಾಂಕ್ ಆಫ್ ಬರೋಡಾ ಸೇವಾ ಶುಲ್ಕ ಹೆಚ್ಚಿಸಿ ನಂತರ ಹಿಂಪಡೆದಿತ್ತು. ಈ ಕುರಿತು ಹಣಕಾಸು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ತಿಂಗಳಲ್ಲಿ ಉಚಿತ ನಗದು ಠೇವಣಿ ಮತ್ತು ಹಣ ಹಿಂಪಡೆಯುವಿಕೆಯ ಸಂಖ್ಯೆಯನ್ನು ಐದರಿಂದ ಮೂರಕ್ಕೆ ಇಳಿಸಲಾಗಿದ್ದು, ಹೆಚ್ಚುವರಿ ವಹಿವಾಟುಗಳ ಶುಲ್ಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ. ಬೇರೆ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್ ಇತ್ತೀಚೆಗೆ ತನ್ನ ಸೇವಾ ಶುಲ್ಕವನ್ನು ಹೆಚ್ಚಳ ಮಾಡಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.