ಮುಖ್ಯಮಂತ್ರಿ ನಿತೀಶ್ ಮೇಲೆ ಈರುಳ್ಳಿ ಎಸೆತ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಮಧುಬಾನಿಯಲ್ಲಿ ಪ್ರಚಾರ ಭಾಷಣ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದುಷ್ಕರ್ಮಿಗಳು ಈರುಳ್ಳಿ ಎಸೆದು, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ.
ರಾಜ್ಯದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಕೊಡುವ ಬಗ್ಗೆ ಆರ್‍ಜೆಡಿ ನೀಡಿರುವ ಸುಳ್ಳು ಭರವಸೆ ಕುರಿತು ನಿತೀಶ್ ಮಾತನಾಡುತ್ತಿದ್ದಂತೆ ದುಷ್ಕರ್ಮಿಗಳು ಈರುಳ್ಳಿ ತೂರಿದ್ದಾರೆ. ಆದರೆ ಈರುಳ್ಳಿ ತೂರಿದವರ ವಿರುದ್ಧ ನಿತೀಶ್ ಆಕ್ರೋಶ ವ್ಯಕ್ತಪಡಿಸದೆ, ಈರುಳ್ಳಿಗಳನ್ನು ತೂರಿ ತೊಂದರೆ ಇಲ್ಲ, ಆದರೆ ಸತ್ಯ ತಿಳಿದುಕೊಳ್ಳಿ ಎಂದಿದ್ದಾರೆ. ಜತೆಗೆ ಕೆಲ ದುಷ್ಕರ್ಮಿಗಳನ್ನು ಪೆÇಲೀಸರು ಹಿಡಿದಿದ್ದರಾದರೂ, ನಿತೀಶ್ ಅವರನ್ನು ಬಿಟ್ಟು ಬಿಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ