ನ.16ರಿಂದ ಶಬರಿಮಲೆ ಮಂಡಲ, ಮಕರಜ್ಯೋತಿ ಉತ್ಸವ ಆರಂಭ

ಶಬರಿಮಲೆ: ಶಬರಿಮಲೆಯಲ್ಲಿ ಈ ಬಾರಿಯ ಮಂಡಲ, ಮಕರಜ್ಯೋತಿ ಉತ್ಸವ ಋತು ನ.16ರಂದು ಆರಂಭಗೊಳ್ಳಲಿದೆ.
ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ಸೀಮಿತ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇದರಂತೆ ವಾರದಲ್ಲಿ ಮೊದಲ ಐದು ದಿನ ತಲಾ 1000 ಮಂದಿ, ಶನಿವಾರ, ಭಾನುವಾರಗಳಂದು ತಲಾ 2000 ಮಂದಿ ಭಕ್ತರಿಗೆ ದರುಶನಕ್ಕೆ ಅನುಮತಿ ನೀಡಲು ತಿರುವಿದಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಮಂಡಲಪೂಜೆ, ಮಕರಜ್ಯೋತಿ ದಿನಗಳಂದು ತಲಾ 5000ರಂತೆ ಭಕ್ತರು ಕ್ಷೇತ್ರ ಪ್ರವೇಶಿಸಬಹುದಾಗಿದೆ. ಶ್ರೀದೇವರ ದರುಶನವನ್ನು ಅಯ್ಯಪ್ಪ ಭಕ್ತರು ವರ್ಚುವಲ್ ಕ್ಯೂ ಮೂಲಕವೇ ನೋಡಲು ಅವಕಾಶ ಕಲ್ಪಿಸಲಾಗಿದೆ. ಶಬರಿಮಲೆಗೆ ಬರುವ ಭಕ್ತರಿಗೆ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ.ಅಲ್ಲದೆ ಆರೋಗ್ಯ ವಿಮೆ ಕಾರ್ಡ್ ಕೂಡಾ ತರಬೇಕಾಗಿದೆ. 24 ಗಂಟೆಯೊಳಗೆ ನಡೆಸಿದ ಕೋವಿಡ್ ತಪಾಸಣೆ ನೆಗೆಟಿವ್ ಆಗಿರುವ ವರದಿ, ಅಲ್ಲದೆ ಭಕ್ತರು ಕಡ್ಡಾಯವಾಗಿ ಮಾಸ್ಕ್ ಹಾಗೂ ಕೈಕವಚ ಧರಿಸಬೇಕು. ಸಾಮೂಹಿಕ ಅಂತರ ಸಹಿತ ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಿ ಮಾತ್ರವೇ ಸನ್ನಿದಾನಕ್ಕೆ ತೆರಳಬೇಕಾಗಿದೆ ಎಂದು ಮಂಡಳಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ