ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭ ಕೋರಿದ ಮೋದಿ

ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನತೆಗೆ ಕನ್ನಡದ ಶುಭಾಶಯ ಕೋರಿಧಾರೆ.ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಕನ್ನಡದ ಟ್ವೀಟ್ ಮಾಡಿ.
ರಾಜ್ಯಗಳು ರಚನೆಯಾದ ದಿನ ಪ್ರಯುಕ್ತ ಕರ್ನಾಟಕ ಮಾತ್ರವಲ್ಲದೆ, ಕೇರಳ, ಮಧ್ಯಪ್ರದೇಶ, ಛತ್ತೀಸಗಢ ಹಾಗೂ ಇತರ ರಾಜ್ಯಗಳ ಜನತೆಗೂ ಪ್ರಧಾನಿ ಶುಭ ಹಾರೈಸಿಧಾರೆ.
ಆಂಧ್ರಪ್ರದೇಶವು ಕಠಿಣ ಪರಿಶ್ರಮ ಮತ್ತು ಸಹಾನುಭೂತಿಗೆ ಪರ್ಯಾಯವಾಗಿದೆ. ಆಂಧ್ರಪ್ರದೇಶದ ಜನರು ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿ ಧಾರೆ. ಆಂಧ್ರಪ್ರದೇಶ ರಚನೆಯಾದ ದಿನದ ಪ್ರಯುಕ್ತ ರಾಜ್ಯದ ಜನತೆಗೆ ಶುಭಾಶಯಗಳು. ರಾಜ್ಯದ ಅಭಿವೃದ್ಧಿಗಾಗಿ ಹಾರೈಕೆಗಳು ಎಂದೂ ಮೋದಿ ಟ್ವೀಟ್ ಮಾಡಿಧಾರೆ.ಭಾರತದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಹರ್ಯಾಣದ ಜನತೆಗೆ ರಾಜ್ಯ ರಚನೆಯಾದ ದಿನದ ಹೃತ್ಪೂರ್ವಕ ಅಭಿನಂದನೆಗಳು. ಸಮೃದ್ಧಿ ಮತ್ತು ಪ್ರಗತಿಯ ಈ ಸಂಕೇತವು ಪ್ರಗತಿಯ ಹೊಸ ದಾಖಲೆಗಳನ್ನು ಮುಂದುವರಿಸಲಿ ಎಂದು ಪ್ರಧಾನಿ ಟ್ವೀಟ್ ಮಾಡಿಧಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ