ಭಾರತ ಪೂರೈಸಲಿದೆ ಜಾಗತಿಕ ಇಂಧನ ಬೇಡಿಕೆ: ಮೋದಿ ದೇಶದ ಇಂಧನ ಭವಿಷ್ಯ ಉಜ್ವಲ ಮತ್ತು ಸುಭದ್ರ

ಹೊಸದಿಲ್ಲಿ: ಭಾರತದ ಇಂಧನ ಭವಿಷ್ಯವು ಉಜ್ವಲ ಹಾಗೂ ಸುಭದ್ರವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿಯವರು, ಜಾಗತಿಕ ಇಂಧನ ಬೇಡಿಕೆಯನ್ನು ದೇಶ ಪೂರೈಸಲಿದೆ ಎಂದಿದ್ದಾರೆ.
ಸೋಮವಾರ ಸೆರವೀಕ್‍ನಿಂದ ಆಯೋಜಿಸಲಾಗಿದ್ದ ಭಾರತ ಇಂಧನ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾದಿಂದಾಗಿ ಜಾಗತಿಕ ಇಂಧನ ಬೇಡಿಕೆಯ ಮೂರನೇ ಒಂದು ಭಾಗಕ್ಕೆ ಕುಸಿದಿದೆ. ಅಲ್ಲದೆ, ಸಾಂಕ್ರಾಮಿಕವು ಮುಂದಿನ ಕೆಲ ವರ್ಷಗಳವರೆಗೆ ಇಂಧನ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಆದರೆ, ಈ ದೀರ್ಘಾವಯಲ್ಲಿ ಇಂಧನ ಬಳಕೆ ದ್ವಿಗುಣವಾಗುವ ಸಾಧ್ಯತೆಯನ್ನು ಭಾರತ ಎದುರು ನೋಡಲಿದೆ. ಆ ವೇಳೆಗಾಗಲೇ ದೇಶ ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನ ಮೂಲವನ್ನು ವೇಗವಾಗಿ ಪಡೆದುಕೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದ ವಿಮಾನಯಾನ ಮಾರುಕಟ್ಟೆಯು ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಇಂಧನ ವಲಯವು ಬೆಳವಣಿಗೆ ಕೇಂದ್ರವಾಗಿದ್ದು, ಹೂಡಿಕೆದಾರ ಮತ್ತು ಪರಿಸರ ಸ್ನೇಹಿಯಾಗಿರಲಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ