ಸಿದ್ದರಾಮಯ್ಯ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕಿತ್ತು

ಚಿಕ್ಕಮಗಳೂರು: ಉಪಚುನಾವಣೆಯ ನಂತರ ಬಂಡೆ ಪುಡಿಯಾಗುತ್ತದೆ, ಹುಲಿಯಾ ಕಾಡಿಗೆ ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ. ಅದನ್ನು ಸಿದ್ದರಾಮಯ್ಯ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕಿತ್ತು. ಅವರ ಹೇಳಿಕೆಯಲ್ಲಿ ಎಲ್ಲೂ ವೈಯಕ್ತಿಕ ದಾಳಿ ಇರಲಿಲ್ಲ ಎಂದು ಬಿಜೆಪಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದಾ ಹುಲಿಯಾ ಎಂದಾಗ, ಸಿದ್ದರಾಮಯ್ಯ ಅದನ್ನು ಹೇಗೆ ಸಂಭ್ರಮಿಸಿದ್ದರೋ ಹಾಗೆಯೇ ಇದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕಿತ್ತು. ಇದಕ್ಕೆ ಇಷ್ಟೊಂದು ಬೇಜಾರಾಗುವುದಾದರೆ ಸಿದ್ದರಾಮಯ್ಯ ನಮ್ಮ ಪ್ರಧಾನಿ ಬಗ್ಗೆ ಬಳಸಿದ ಭಾಷೆ ಹೇಗಿತ್ತು? ಹಾಗಾದರೆ ನಾವು ಅವರಿಗೇನು ಮಾಡಬೇಕಿತ್ತು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಪದಕ್ಕೆ ಮತ್ತು ಕರ್ನಾಟಕದ ಸುಸಂಸ್ಕøತಿಗೆ ಪೂರಕವಾದ ಭಾಷೆಯನ್ನು ಟ್ವಿಟರ್‍ನಲ್ಲಿ ಬಳಸಿರಲಿಲ್ಲ ಎಂದರು.
ಸಭ್ಯತೆ ಎಲ್ಲೆಯನ್ನು ಯಾರೂ ಮೀರಬಾರದು. ಶತ್ರುಗಳಿಗೂ ಗೌರವಿಸುವ ಸಮಾಜ ನಮ್ಮದು. ಯುದ್ಧದಲ್ಲಿ ಸತ್ತ ಶತ್ರುವಿಗೂ ಅಂತ್ಯ ಸಂಸ್ಕಾರ ನೆರವೇರಿಸಿದ ಉದಾಹರಣೆ ನಮ್ಮ ಚರಿತ್ರೆಯಲ್ಲಿ ಸಿಗುತ್ತದೆ. ಆದರೆ ನಾವ್ಯಾರೂ ಶತ್ರುಗಳಲ್ಲ. ರಾಜಕೀಯ ವಿರೋಗಳು. ಕೆಲವೊಮ್ಮೆ ನಾವು ಬಳಸುವ ಭಾಷೆ ನಮ್ಮ ಗೌರವವನ್ನು ಹೆಚ್ಚು ಮತ್ತು ಕಡಿಮೆ ಮಾಡುತ್ತದೆ. ಪರಸ್ಪರ ರಾಜಕೀಯ ಟೀಕೆಗಳು ಇರಬೇಕು. ಆದರೆ ಅದು ಸಭ್ಯತೆಯ ಎಲ್ಲೆ ಮೀರದಂತೆ ನೋಡಿಕೊಳ್ಳಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ