ಮಾರ್ಗಸೂಚಿ ಅನ್ವಯ ಆನ್‍ಲೈನ್ ತರಗತಿ ನಡೆಸಿ

ಬೆಂಗಳೂರು: ಆನ್‍ಲೈನ್ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆಯಾಗು ತ್ತಿರುವುದರ ಕುರಿತು ಮಾಹಿತಿ ಬಂದಿದ್ದು ಮಾರ್ಗ ಸೂಚಿ ಅನ್ವಯ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ತಮಗೆ ತೋಚಿದಂತೆ ಆನ್‍ಲೈನ್ ತರಗತಿಗಳನ್ನು ಮಾಡುವಂತಿಲ್ಲ. ಇದಕಾಗಿ ತಜ್ಞರು ನೀಡಿರುವ ವರದಿ ಹಾಗೂ ಸಲಹೆಗಳ ಮೇರೆಗೆ ಮಾರ್ಗಸೂಚಿ ತಯಾರಿಸಲಾಗಿದೆ. ಈ ಸೂಚನೆಯನ್ವಯ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ತರಗತಿ ನಡೆಸುವಂತೆ ಆದೇಶ ಹೊರಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ