ಶಿರಾ ಉಪಕದನ: ಕಮಲ, ಕೈ , ದಳ ಮತ ಪ್ರಚಾರ ಬಿರುಸು ಬಿಜೆಪಿಗೆ ಶಿರಾ ಮತದಾರರ ಬೆಂಬಲ

ಶಿರಾ: ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿಗೆ ಶಿರಾ ಕ್ಷೇತ್ರದ ಮತದಾರರು ಬೆಂಬಲಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉಪಚುನಾವಣೆ ಪ್ರಯುಕ್ತ ಹುಲಿಕುಂಟೆ ಹೋಬಳಿಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ರಾಜಕೀಯದ ಹಿನ್ನೆಲೆ ಹೊಂದಿದವರು. ಅವರ ತಂದೆ ಒಂದು ಬಾರಿ ಶಾಸಕರು ಮೂರು ಬಾರಿ ಸಂಸದರಾಗಿದ್ದವರು. ಅವರಿಗೆ ಕ್ಷೇತ್ರದ ಸಂಪೂರ್ಣ ಪರಿಚಯವಿದೆ. ಅಭ್ಯರ್ಥಿ ಯುವ ಸಮೂಹವನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಶಿರಾ ಕ್ಷೇತ್ರ ಬಿಜೆಪಿ ವಶವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಶೆಟ್ಟಿ, ಜಯಮ್ಮ, ಚಂದ್ರಮ್ಮ, ಪದ್ಮಕ್ಕ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ