ಕಮೀಷನ್ ಸರ್ಕಾರ: ಸಿದ್ದರಾಮಯ್ಯ

ಬೆಳಗಾವಿ: ಲಂಚ ಕೊಡುವವರಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ ರಾಜ್ಯ ಸರ್ಕಾರ. ಇದು ಕಮೀಷನ್ ಸರ್ಕಾರವಾಗಿದೆ ಎಂದು ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಅವರು ಸೋಮವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ ಮಾತನಾಡಿ, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ನೀಡಿ ಕಮೀಷನ್ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಳಿನಕುಮಾರ ಕಟೀಲ್ ಯಕ್ಷಚಿತ ರಾಜಕಾರಣಿ. ಬಿಜೆಪಿಯ ಅಧ್ಯಕ್ಷರಾಗಿ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು. ಕಾಂಗ್ರೆಸ್‍ನ್ನು ಅರಬಿ ಸಮುದ್ರಕ್ಕೆ ಎಸೆಯಬೇಕು ಎನ್ನುತ್ತಾನೆ ಎಂದರೆ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿ ಆಡಳಿತದಲ್ಲಿ ಆತ್ಮಹತ್ಯೆಗಳು ನಿಂತಿದೆಯಾ.. ? ನೇಕಾರರ ಆತ್ಮಹತ್ಯೆ ಏಕೆ ಆಗುತ್ತಿವೆ. ಈ ಸರ್ಕಾರದಲ್ಲಿ ದುಡ್ಡೇ ಇಲ್ಲ. ನಿಂತೋಗಿರುವ ಸಮುದಾಯಗಳಿಗೆ ಅನುದಾನ ನೀಡಿ ಎಂದರೆ ಹಣ ಇಲ್ಲ ಎಂದು ರಾಮುಲು ಹೇಳುತ್ತಾರೆ.
ಪ್ರವಾಹದಲ್ಲಿ ಮನೆ ಬಿದ್ದರವರಿಗೆ ಯಾರಿಗೆ ಹಣ ನೀಡಿದ್ದಾರೆ. ಜಿಲ್ಲಾಕಾರಿ ಖಾತೆಯಲ್ಲಿದ್ದರೆ ಸಂತ್ರಸ್ತರಿಗೆ ತಲುಪಬೇಕಲ್ವಾ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ