ಅದಾನಿ ಗ್ರೂಪ್‍ಗೆ ತಿರುವನಂತಪುರ ವಿಮಾನ ನಿಲ್ದಾಣದ ಗುತ್ತಿಗೆ ನಿರ್ವಹಿಸಬಹುದು; ಹೈಕೋರ್ಟ್ ಕೇಂದ್ರ ಸರಕಾರ ನಿರ್ಧಾರ ವಿರೋಸಿದ ಕೇರಳ ಸರಕಾರಕ್ಕೆ ಮುಖಭಂಗ

ಕೊಚ್ಚಿ: ತಿರುವನಂತಪುರ ವಿಮಾನ ನಿಲ್ದಾಣದ ಹೊಣೆಗಾರಿಕೆಯನ್ನು ಅದಾನಿ ಗ್ರೂಪ್‍ಗೆ ನೀಡಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಸಿ ಕೇರಳ ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಹೈಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದೆ. ಜಸ್ಟಿಸ್ ವಿನೋದ್‍ಚಂದ್ರನ್, ಜಸ್ಟಿಸ್ ಸಿ.ಎಸ್. ಡಯಸ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಈ ಮಹತ್ವದ ಆದೇಶದಿಂದ ಕೇಂದ್ರ ಸರಕಾರದ ನಿರ್ಧಾರಕ್ಕೆ ಹಸಿರು ನಿಶಾನೆ ತೋರಿಸಿದೆ.
ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ಹಾಗೂ ರಾಜ್ಯ ಸರಕಾರವನ್ನು ಕಡೆಗಣಿಸಿ ಅದಾನಿ ಗ್ರೂಪ್‍ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ರಾಜ್ಯ ಸರಕಾರದ ವಾದಿಸುತ್ತಾ ಬಂದಿತ್ತು. ಅಲ್ಲದೆ ಹರಾಜು ಪ್ರಕ್ರಿಯೆ ಕ್ರಮಗಳು ಸರಿಯಾದ ರೀತಿಯಲ್ಲಿ ನಡೆಸಲಿಲ್ಲ ಎಂದು ಸರಕಾರ ಆರೋಪಿಸಿತ್ತು. ಜಾಗ ಖರೀದಿ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಪೂರ್ತಿಗೊಳಿಸಿದೆ. ಹಾಗಾಗಿ ಇದರ ಸಂಪೂರ್ಣ ಜವಾಬ್ದಾರಿಯನ್ನು ಕೇರಳಕ್ಕೆ ನೀಡಬೇಕೆಂಬ ವಾದವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ಎಲ್ಲರ ಒಪ್ಪಿಗೆಯೊಂದಿಗೆ ಟೆಂಡರ್ ಪ್ರಕ್ರಿಯೆ ಆದ ಬಳಿಕ ಅದು ಸರಿಯಾದ ರೀತಿಯಲ್ಲಿ ನಡೆಯಲಿಲ್ಲ ಎಂಬ ವಾದವನ್ನು ನಂತರ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.ಕೇರಳ ಸರಕಾರದ ಈ ನಡೆ ವಿರುದ್ಧ ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಆಕ್ಷೇಪ ಸಲ್ಲಿಸಿ, ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಉಳಿದ ನಿಲ್ದಾಣದದ ಹೊಣೆಯೂ ಅದಾನಿ ಸಂಸ್ಥೆಗೆ!
ನ್ಯಾಯಾಲಯ ಈ ಪ್ರಕರಣದಲ್ಲಿ ಇರುವ ಸಂದರ್ಭದಲ್ಲಿಯೇ ತಿರುವನಂತಪುರ ವಿಮಾನ ನಿಲ್ದಾಣದ ಹೊಣೆಗಾರಿಕೆಯನ್ನು ಅದಾನಿ ಗ್ರೂಪ್ ವಹಿಸಿಕೊಂಡಿತ್ತು. ಎರಡು ವರ್ಷಗಳ ಹಿಂದೆ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲು ಆರಂಭಿಸಲಾಗಿತ್ತು. 2019 ಫೆಬ್ರವರಿಯಲ್ಲಿ ನಡೆಸಿದ ಟೆಂಡರ್‍ನಲ್ಲಿ ಅದಾನಿ ಸಂಸ್ಥೆ ಪಾಲಾಗಿತ್ತು. ಸರಕಾರದ ಪರವಾಗಿ ಕೆಎಸ್‍ಐಡಿಸಿ ಟೆಂಡರ್‍ನಲ್ಲಿ ಗುತ್ತಿಗೆ ಪಡೆಯುವಲ್ಲಿ ವಿಫಲವಾಗಿತ್ತು. ಪಿಣರಾಯಿ ಸರಕಾರದ ಹಾಗೂ ಯುಡಿಎಫ್‍ನ ವಿರೋಧದ ನಡೆವೆಯೂ ರಾಜ್ಯದ ಉಳಿದ ವಿಮಾನ ನಿಲ್ಧಾಣದ ಹೊಣೆಗಾರಿಕೆಯನ್ನು ಅದಾನಿ ಸಂಸ್ಥೆಗೆ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಏರ್‍ರ್ಟ್ ಅಥೋರಿಟಿ ಆಫ್ ಇಂಡಿಯಾಯು ಅದಾನಿ ಗ್ರೂಪ್‍ನೊಂದಿಗೆ ವಿಮಾನ ನಿಲ್ದಾಣದ ಹೊಣೆಗಾರಿಕೆಗಾಗಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ