ಭಗವಂತನ ದಯೆ ಇದ್ದರೆ ಡಿಸಿಎಂ ಆಗುವೆ: ಸಚಿವ ಬಿ.ಶ್ರೀರಾಮುಲು

ಬಳ್ಳಾರಿ: ಶ್ರೀರಾಮುಲು ಅವರು ಉಪ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಹಾಗೂ ಅಭಿಮಾನಿಗಳ ಬೇಡಿಕೆಯಾಗಿದೆ. ದೇವರ ದಯೆ ಇದ್ದರೆ ಈ ಅವಯಲ್ಲೇ ಖಂಡಿತ ಉಪ ಮುಖ್ಯಮಂತ್ರಿಯಾಗುವೆ ಎಂದು ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಉತ್ತಮ ಸ್ಥಾನಮಾನ ಪಡಿಯಬೇಕಾದರೆ ತಾಳ್ಮೆಯಿಂದ ಕಾಯಬೇಕಾಗಲಿದೆ. ಮುಂದೊಂದು ದಿನ ಪಕ್ಷ ನಮ್ಮ ಶ್ರದ್ಧೆ ಗಮನಿಸಿ ಅವಕಾಶ ಮಾಡಿಕೊಡುವ ವಿಶ್ವಾಸವಿದೆ. ದೇವರ ಆರ್ಶಿವಾದದಿಂದ ಉನ್ನತ ಸ್ಥಾನ ಮಾನ ದೊರೆಯಲಿದೆ ಎಂದರು.
ರಾಜ್ಯದಲ್ಲಿ ಸದ್ಯ ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರದ ವಿಧಾನಸಭೆ ಚುಮಾವಣೆ ನಡೆಯುತ್ತಿದ್ದು, ಬಿಜೆಪಿಗೆ ಉತ್ತಮ ವಾತಾವರಣವಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಮತಗಳ ಅಂತರಗಳಲ್ಲಿ ಗೆಲುವು ಸಾಸಲಿದ್ದಾರೆ. ಈ ಚುನಾವಣೆ ಫಲಿತಾಂಶದ ಆಧಾರದ ಮೇಲೆ ನನ್ನ ಸ್ಥಾನಮಾನದ ಬಗ್ಗೆ ನಿರ್ಧಾರವಾಗಲಿದೆ ಎಂದು ಅಚ್ಚರಿ ಮೂಡಿಸಿದರು.
ಈ ಖಾತೆ ನನ್ನ ಆಯ್ಕೆ
ಸಮಾಜ ಕಲ್ಯಾಣ ಖಾತೆ ನನ್ನ ಆಯ್ಕೆಯಾಗಿದೆ. ಮಾಜಿ ಸಿಎಂ ಡಿ.ದೇವರಾಜ ಅರಸು ಸೇರಿದಂತೆ ಇನ್ನಿತರೆ ಅನೇಕ ಮಹನೀಯರು ಸೇವೆ ಸಲ್ಲಿಸಿದ ಈ ಖಾತೆಯ ಜವಾಬ್ದಾರಿಯನ್ನು ನಾನು ಪಡೆದುಕೊಂಡಿರುವುಸು ಸಂತಸ ಮೂಡಿಸಿದೆ. ಈಗಾಗಲೇ ನಾನು ಅರಸು ಅವರ ಕಾಲದ ಕಡತಗಳನ್ನು ಅಧ್ಯಯನ ಮಾಡುತ್ತಿರುವೆ. ಹಿಂದುಳಿದ ಹಾಗೂ ಬಡ ಜನರ ಕಲ್ಯಾಣಕ್ಕಾಗಿ ಶ್ರಮಿಸಲು ನನಗೆ ಈ ಖಾತೆ ಪೂರಕವಾಗಿದೆ. ಆರೋಗ್ಯ ಇಲಾಖೆಯಲ್ಲಿ ಮಾಡಿದ ಒಂದಿಷ್ಟು ಉತ್ತಮ ಕಾರ್ಯಗಳನ್ನು ನೋಡಿ ಸಿಎಂ ಅವರು ಈ ಖಾತೆಯನ್ನು ನನ್ನ ಹೆಗಲಿಗೆ ಹಾಕಿದ್ದಾರೆ. ಮೇಲಾಗಿ, ನಾನು ಈ ಖಾತೆಯನ್ನೇ ಕೇಳಿದ್ದೆ. ನನಗೆ ನಾನು ಬಯಸಿದ ಖಾತೆಯನ್ನೇ ಕೊಟ್ಟಿದ್ದಾರೆ ಎಂದರು.
ಬಿ.ಶ್ರೀರಾಮುಲು ಅವರಿಗೆ ಪಕ್ಷ ಯಾವುದೇ ರೀತಿಯ ಕೊರತೆ ಮಾಡಿಲ್ಲ. ನಮ್ಮ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇದ್ದೇ ಇದೆ. ನನಗೂ ಕೂಡ ಪಕ್ಷ ಯಾವುದೇ ಕೊರತೆ ಮಾಡಿಲ್ಲ. ಅಕಾರ, ಸೂಕ್ತ ಸ್ಥಾನಮಾನ ಕಲ್ಪಿಸಿದೆ. ನನ್ನ ಶ್ರಮಕ್ಕೆ ತಕ್ಕಂತೆ ಪಕ್ಷ ನನಗೆ ಸೂಕ್ತ ಸ್ಥಾನಮಾನ ಕಲ್ಪಿಸಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ