ನವೆಂಬರ್ ಮೊದಲ ವಾರದಲ್ಲಿ ಮತ್ತೆ 3 – 4 ರಫೇಲ್ ಜೆಟ್ ಭಾರತಕ್ಕೆ!

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಕಾರಣ ಈಗಾಗಲೇ ಫ್ರಾನ್ಸ್ನಿಂದ ಐದು ರಫೇಲ್ ಜೆಟ್ಗಳ ಮೊದಲ ಬ್ಯಾಚ್ ಜುಲೈ 29ರಂದು ಭಾರತಕ್ಕೆ ಆಗಮಿಸಿ, ವಾಯುಸೇನೆ ಸೇರಿಕೊಂಡಿವೆ.
ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬ್ಯಾಚ್ನ 3 – 4 ಹೊಸ ಯುದ್ಧ ವಿಮಾನಗಳಾದ ರಫೇಲ್ ಫೈಟರ್ ಜೆಟ್ ಭಾರತಕ್ಕೆ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಆಗಮಿಸಲಿವೆ. ಫ್ರಾನ್ಸ್ನೊಂದಿಗೆ 59 ಸಾವಿರ ಕೋಟಿ ರೂ ವೆಚ್ಚದಲ್ಲಿ ಒಟ್ಟು 36 ರಫೇಲ್ ವಿಮಾನಗಳ ಒಪ್ಪಂದ ಮಾಡಿಕೊಳ್ಳಲಾಗಿದ್ದು, 2023ರವೇಳಗೆ ಈ ಎಲ್ಲ ಯುದ್ಧ ವಿಮಾನಗಳು ಭಾರತದ ಬತ್ತಳಿಕೆ ಸೇರಿಕೊಳ್ಳಲಿವೆ.
ಹರಿಯಾಣದ ಅಂಬಾಲಾ ವಾಯುನೆಲೆಗೆ ಇವು ಬಂದು ಇಳಿಯಲಿದ್ದು, ಈಗಾಗಲೇ ಸಿದ್ಧತೆ ಆರಂಭಗೊಂಡಿದೆ. ಮೊದಲ ಬ್ಯಾಚ್ನ ಯುದ್ಧ ವಿಮಾನಗಳನ್ನ ಈಗಾಗಲೇ ಲಡಾಖ್ನಲ್ಲಿ ನಿಯೋಜನೆ ಮಾಡಲಾಗಿದೆ. ಮೊದಲನೇ ಹಂತದ 10 ರಫೇಲ್ಗಳ ಪೈಕಿ 5 ವಿಮಾನಗಳು ಫ್ರಾನ್ಸ್ನಲ್ಲಿದ್ದು, ಅಲ್ಲೇ ಭಾರತೀಯ ಪೈಲಟ್ಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಅವರ ತರಬೇತಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ