ಆಲಮಟ್ಟಿ ಜಲಾಶಯ: 1.17 ಲಕ್ಷ ಕ್ಯುಸೆಕ್ ಒಳಹರಿವು

ಆಲಮಟ್ಟಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಬುಧವಾರ ಸಂಜೆ 1.17 ಲಕ್ಷ ಕ್ಯುಸೆಕ್ ಗೆ ಹೆಚ್ಚಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ.
ಆಲಮಟ್ಟಿ ಜಲಾಶಯದ ಬಲಭಾಗದ ಕೆಪಿಸಿಎಲ್ ಮೂಲಕ 37 ಸಾವಿರ ಕ್ಯುಸೆಕ್, ಜಲಾಶಯದ 26 ಗೇಟ್ ಗಳ ಪೈಕಿ 24 ಗೇಟ್ ಗಳ ಮೂಲಕ 80 ಸಾವಿರ ಕ್ಯುಸೆಕ್ ಸೇರಿ 1.17 ಲಕ್ಷ ಕ್ಯುಸೆಕ್ ನೀರನ್ನು ನದಿ ತಳಪಾತ್ರಕ್ಕೆ ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಿಂದ ಗುರುವಾರ 40 ಸಾವಿರ ಕ್ಯುಸೆಕ್ ಗೂ ಅಕ ನೀರು ಹರಿದು ಬರುವ ನಿರೀಕ್ಷೆಯಿದ್ದು, ಜಲಾಶಯದ ಹೊರಹರಿವು ಗುರುವಾರ ಇನ್ನಷ್ಟು ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.
ಮುಂಜಾಗ್ರತೆಯ ಕ್ರಮವಾಗಿ ಜಲಾಶಯದ ಮಟ್ಟವನ್ನು ಅಲ್ಪ ಕಡಿಮೆಗೊಳಿಸಲಾಗಿದ್ದು, 519.55 ಮೀ.ಗೆ ಇಳಿಸಲಾಗಿದೆ.
ಹಿಂಭಾಗದ ವಿವಿಧ ಹಳ್ಳ ಕೊಳ್ಳಗಳಿಂದ ಮಳೆ ನೀರು ಕೃಷ್ಣೆಗೆ ಸೇರುತ್ತಿದ್ದು, ಗಂಟೆ ಗಂಟೆಗೂ ನೀರಿನ ಹರಿವಿನಲ್ಲಿ ಹೆಚ್ಚು ಕಡಿಮೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಪ್ರವಾಹದ ಯಾವುದೇ ಆತಂಕ ಇಲ್ಲ ಎಂದು ಕೆಬಿಜೆಎನ್ ಎಲ್ ಅಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ