ಕೋವಿಡ್-19ವಿರುದ್ಧ ಪ್ರಧಾನಿ ಕರೆಗೆ ಪ್ರತಿಯೊಬ್ಬರೂ ಸ್ಪಂದಿಸಿ:ಶಾ ಮನವಿ

ಹೊಸದಿಲ್ಲಿ :ಕೋವಿಡ್-19ಪಿಡುಗಿನ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಕರೆಯನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ದೇಶದ ಜನತೆ ಒಂದಾಗಿ ಹೋರಾಡಿದಾಗ ಮಾತ್ರವೇ ಈ ಹೆಮ್ಮಾರಿಯನ್ನು ನಿಯಂತ್ರಿಸಲು ಸಾಧ್ಯವಿದೆ. ಇದಕ್ಕಾಗಿ ನಾವು ಮೂರು ಮಂತ್ರಗಳನ್ನು ಅನುಸರಿಸುವುದೇ ಸದ್ಯಕ್ಕೆ ಇರುವ ಏಕೈಕ ದಾರಿ.ಮಾಸ್ಕ್ ಧರಿಸುವುದು, ಕನಿಷ್ಠ ಎರಡು ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕೆಂಬುದಾಗಿ ಪ್ರಧಾನಿ ಮೋದಿಯವರು ನೀಡಿದ ಮೂರು ಮಂತ್ರಗಳನ್ನು ಅನುಸರಿಸುವ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಮತ್ತು ಇತರರನ್ನು ಕೂಡಾ ಅಪಾಯದಿಂದ ಪಾರು ಮಾಡಬಹುದಾಗಿದೆ ಎಂದು ಶಾ ಅವರು ದೇಶದ ಜನತೆಯನ್ನುದ್ದೇಶಿಸಿ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
ಈ ಜಾಗತಿಕ ಪಿಡುಗಿನ ವಿರುದ್ಧ ದೇಶದ ನಾಗರಿಕರೆಲ್ಲರೂ ಒಂದಾಗಿ ಹೋರಾಟ ನಡೆಸಿದಲ್ಲಿ ಮಾತ್ರವೇ ನಾವು ಇದರಲ್ಲಿ ಯಶಸ್ವಿಯಾಗಲು ಸಾಧ್ಯ. ಪ್ರಧಾನಿ ಮೋದಿಯವರು ಈ ನಿಟ್ಟಿನಲ್ಲಿ ಆರಂಭಿಸಿದ ಬೃಹತ್ ಅಭಿಯಾನದಲ್ಲಿ ಪ್ರತಿಯೊಬ್ಬರೂ ಜೋಡಿಕೊಳ್ಳಬೇಕು. ಈ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ದೇಶದಿಂದ ಈ ಪಿಡುಗನ್ನು ಹೊರಹಾಕಲು ಕೈಜೋಡಿಸಬೇಕಾಗಿದೆ .
ಕೇವಲ ನೀವು ನಿಮ್ಮನ್ನು ಮಾತ್ರವೇ ಸುರಕ್ಷಿತವಾಗಿಟ್ಟುಕೊಂಡರೆ ಸಾಲದು.ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳನ್ನು ಕೂಡಾ ಕೋವಿಡ್-19ರ ಆಪತ್ತಿನಿಂದ ಪಾರು ಮಾಡಲು ಶ್ರಮಿಸಬೇಕಾದುದು ಅಗತ್ಯ. ಇದಕ್ಕಾಗಿಯೇ ಪ್ರಧಾನಿ ಮೋದಿಯವರು, ಕೋವಿಡ್-19ರ ವಿರುದ್ಧ ಭಾರತದ ಹೋರಾಟ ಅದು ಜನತಾ ಹೋರಾಟ. ಇದರಿಂದ ಕೋವಿಡ್ ವಾರಿಯರ್ಸ್‍ಗೆ ಹೆಚ್ಚಿನ ಬಲ ಬರಲಿದೆ . ಈ ಕಾರಣದಿಂದ ಜನತೆ ಕೋವಿಡ್ ವಿರುದ್ಧದ ಮುಂಜಾಗೃತಾ ಕ್ರಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಜನತೆಯನ್ನು ಆಗ್ರಹಿಸಿರುವುದು ಎಂದು ಅಮಿತ್ ಶಾ ನುಡಿದರು.ಈಗಾಗಲೇ ಪ್ರಧಾನಿ ಮೋದಿಯವರು “ವೈರಸ್‍ನಿಂದ ನಮ್ಮ ನಾಗರಿಕರನ್ನು ರಕ್ಷಿಸಲು ನಾವು ಅಭಿಯಾನವನ್ನು ಮುಂದುವರಿಸಲಿದ್ದೇವೆ “ಎಂಬುದಾಗಿ ಹ್ಯಾಶ್‍ಟ್ಯಾಗ್ ಸಂದೇಶದ ಮೂಲಕ ಟ್ವೀಟ್ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ