ಹತ್ರಾಸ್ ಕೇಸ್:ಜಾತೀಯ ಗಲಭೆ ಸೃಷ್ಟಿಸಲು ಕಾಂಗ್ರೆಸ್ ಯತ್ನ ಬಯಲಿಗೆ !

ಲಕ್ನೋ: ದಲಿತ ಯುವತಿಯೊಬ್ಬಳ ಅತ್ಯಾಚಾರ ಪ್ರಕರಣದಿಂದ ಸುದ್ದಿಯಾಗಿರುವ ಹತ್ರಾಸ್‍ನ ಬೂಲ್ಗರಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕರು ನಿರ್ದಿಷ್ಟ ಜಾತಿಯ ಜನರನ್ನು ಪ್ರಚೋದಿಸಿ ಹಿಂಸೆಗೆ ಕುಮ್ಮಕ್ಕು ನೀಡಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರೊಂದಿಗೆ ಹತ್ರಾಸ್ ಪ್ರಕರಣದ ಹಿಂದೆ ನಡೆಯುತ್ತಿರುವ ರಾಜಕೀಯ ಪಿತೂರಿ ಆರೋಪಗಳಿಗೆ ಇನ್ನಷ್ಟು ಪುಷ್ಟಿ ಲಭಿಸಿದಂತಾಗಿದೆ.
ಹತ್ರಾಸ್ ಘಟನೆಯನ್ನು ಕಾಂಗ್ರೆಸ್ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಬಳಸಿಕೊಂಡಿದೆ ಎಂಬುದಾಗಿ ಕಾಂಗ್ರೆಸ್ ನಾಯಕ ಶ್ಯೋರಾಜ್ ಜೀವನ್ ಅವರೇ ಒಪ್ಪಿಕೊಳ್ಳುತ್ತಿರುವುದು ವೀಡಿಯೊಗಳಲ್ಲಿ ಕಾಣಿಸಿದೆ. ಜಿಲ್ಲೆಯಲ್ಲಿ ಜಾತಿ ಹಿಂಸಾಚಾರವನ್ನು ಉಂಟುಮಾಡುವ ಉದ್ದೇಶದಿಂದ ಅವರು ಹತ್ರಾಸ್ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ಕುಟುಂಬ ಮತ್ತು ಇಡೀ ವಾಲ್ಮೀಕಿ ಸಮುದಾಯವನ್ನು ಪ್ರಚೋದಿಸಲು ಪ್ರಚೋದನಕಾರಿ ಭಾಷೆಯನ್ನು ಬಳಸಿರುವುದೂ ಅದರಲ್ಲಿ ಕಂಡುಬಂದಿದೆ.
ಈ ದಾಖಲೆಗಳಂತೆ, ಸೆ. 19ರಂದು ಅಲಿಗಢದ ಜೆಎಲ್‍ಎನ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ಜೀವನ್, ಹತ್ರಾಸ್‍ನಲ್ಲಿ ಜಾತೀಯ ಗಲಭೆಗಳನ್ನು ಸೃಷ್ಟಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಒಂದು ವೇಳೆ ಗಲಭೆ ಶುರವಾದರೆ ಹಿಂಸಾಚಾರವನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಜೀವನ್ ಅವರು ಕಾಂಗ್ರೆಸ್‍ನ ಸಾಮಾನ್ಯ ಮುಖಂಡರಾಗಿರದೆ ಮಾಜಿ ಕೇಂದ್ರ ಸಚಿವರು ಹಾಗೂ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದಾರೆ ಎಂಬುದು ಗಮನಾರ್ಹ. ಹತ್ರಾಸ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂ ಮತ್ತು ಪ್ರಿಯಾಂಕಾ ವಾದ್ರಾ `ಹೈಡ್ರಾಮಾ’ಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪದ ನಡುವೆಯೇ ಈ ಕೃತ್ಯ ಬೆಳಕಿಗೆ ಬಂದಿದೆ.
ವಿಡಿಯೋ ತುಣುಕುಗಳನ್ನು ಆಧರಿಸಿ ದೇಶದ್ರೋಹದ ಆರೋಪದಡಿಯಲ್ಲಿ ಹತ್ರಾಸ್ಲೀ ಪೋಸರು ಆಲಿಗಢ ಮೂಲದ ಶ್ಯೋರಾಜ್ ಜೀವನ್ ವಿರುದ್ಧ ಪ್ರಕರಣ ದಾಖಲಿಸಿದ್ದು, ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.ಆದರೆ ತನ್ನ ವಿರುದ್ಧದ ಆರೋಪಗಳನ್ನು ಜೀವನ್ ಅಲ್ಲಗಳೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ