ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ಹೊರಟ ಉತ್ಸವ ನವರಾತ್ರಿಯ ದಿನ ಉತ್ಸವ ಮೂರ್ತಿಗೆ ವಿಶೇಷ ಪೂಜೆ

ಮೈಸೂರು: ವಿವಿಧ ಸಾಂಪ್ರದಾಯಿಕ ಪೂಜಾ ಕಾರ್ಯದ ಮೂಲಕ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.
ಬುಧವಾರ ಜಂಬೂ ಸವಾರಿ ಮೆರವಣಿಗೆ ವೇಳೆ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾಗುವ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಅಂಬಾವಿಲಾಸ ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ತರಲಾಯಿತು. ಚಾಮುಂಡಿ ಬೆಟ್ಟದ ದೇವಸ್ಥಾನದ ಆಡಳಿತಾಕಾರಿ ಸಮ್ಮುಖದಲ್ಲಿ ಬೆಟ್ಟಕ್ಕೆ ನಾಡದೇವಿ ಉತ್ಸವಮೂರ್ತಿ ರವಾನಿಸಲಾಯಿತು.
ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ದಿನದಂದು ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಉತ್ಸವ ಮೂರ್ತಿ ಪ್ರತಿಮೆಯನ್ನು ಬೆಟ್ಟದ ಸಿಬ್ಬಂದಿ ಶುಚಿಗೊಳಿಸಿ, ಪೂಜೆಗೆ ಸಿದ್ಧತೆಗೊಳಿಸಲಿದ್ದಾರೆ. ಜಂಬೂ ಸವಾರಿ ದಿನ ಮತ್ತೆ ನಾಡದೇವಿಯ ಉತ್ಸವ ಮೂರ್ತಿ ಅರಮನೆಗೆ ಹಿಂದಿರುಗಲಿದೆ.
ಪಂಚಲೋಹದಿಂದ ನಿರ್ಮಾಣಗೊಂಡಿರುವ ನಾಡದೇವಿ ಉತ್ಸವ ಮೂರ್ತಿಯನ್ನ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಿ, ಮೆರವಣಿಗೆ ಮಾಡಲಾಗುತ್ತದೆ.
ಈ ಚಿನ್ನದ ಅಂಬಾರಿಯನ್ನು ಈ ಬಾರಿಯ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಹೊರಲಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ