ಕೊರೋನಾ ಹಿನ್ನೆಲೆ ಸ್ವದೇಶಕ್ಕೆ ಹೋಗುವಂತೆ ಯುಎಇ ಸೂಚನೆ | ದಕ್ಷಿಣ ಭಾರತೀಯರೇ ಹೆಚ್ಚು 33 ಲಕ್ಷ ಭಾರತೀಯರ ಭವಿಷ್ಯ ಅತಂತ್ರ

ದುಬೈ: ಕೊರೋನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಯುಎಇಯಲ್ಲಿರುವ ತಮ್ಮ ದೇಶವಾಸಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಯುಎಇ ಸೂಚನೆ ನೀಡಿರುವ ಹಿನ್ನೆಲೆ ಅಲ್ಲಿ ಉದ್ಯೋಗಿಗಳಾಗಿರುವ 33 ಲಕ್ಷ ಭಾರತೀಯರ ಭವಿಷ್ಯ ಅತಂತ್ರದಲ್ಲಿದೆ.

ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಗಲ್ ದೇಶದಲ್ಲಿ ಕೆಲಸ ಮಾಡುತ್ತಿರುವ ತಮ್ಮ ನಾಗರಿಕರನ್ನು ಮರಳಿ ಕರೆಸಿಕೊಳ್ಳಲು ಹಿಂಜರಿಯುವ ದೇಶಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲು ಯುಎಇ ಚಿಂತನೆ ನಡೆಸಿದೆ.

ಯುಎಇಯಲ್ಲಿರುವ ಹಲವು ರಾಷ್ಟ್ರಗಳು ತಮ್ಮ ಪ್ರಜೆಗಳನ್ನು ಮರಳಿ ಕರೆಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿರುವ ಅಲ್ಲಿನ ಸರ್ಕಾರ ಮುಂದಿನ ದಿನಗಳಲ್ಲಿ ಉದ್ಯೋಗಗಳ ಮೇಲೆ ನಿರ್ಬಂಧ ಹೇರುವುದು ಇಲ್ಲವೆ ಕೋಟಾ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅಲ್ಲದೆ, ಇತರೆ ರಾಷ್ಟ್ರಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಸಹ ಕೈಬಿಡಲು ತೀರ್ಮಾನಿಸಿದೆ ಎಂದು ಯುಎಇ ಸರ್ಕಾರದ ಉನ್ನತ ಅಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ತಮ್ಮ ನಾಗರಿಕರನ್ನು ಕರೆಸಿಕೊಳ್ಳದಿರುವ ರಾಷ್ಟ್ರಗಳೊಂದಿಗೆ ಸಹಕಾರ ಮತ್ತು ಕಾರ್ಮಿಕ ಸಂಬಂಧಗಳನ್ನು ಪುನರ್‍ರಚಿಸಲಿದೆ ಎಂದು ಯುಎಇ ವರದಿ ತಿಳಿಸಿದೆ.

ಕುವೈತ್ ಅಕ್ರಮ ವಲಸಿಗರೊ ಈ ಸಾಂಕ್ರಾಮಿಕ ಅವಯಲ್ಲಿ ವೀಸಾ ಅವ ಮುಗಿದವರನ್ನು ಏಪ್ರಿಲ್ 30ರೊಳಗೆ ದೇಶವನ್ನು ತೊರೆಯುವಂತೆ ಹೇಳಿದೆ. ಅಲ್ಲದೆ, ಆ ದಿನಾಂಕದವರೆಗೆ ಯಾವುದೇ ದಂಡ ವಿಸುವುದಿಲ್ಲ ಎಂದು ಹೇಳಿದೆ.

ಈ ನಿಟ್ಟಿನಲ್ಲಿ ಕುವೈತ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಭಾರತೀಯ ಸರ್ಕಾರದ ಮೂಲಗಳು ತಿಳಿಸಿವೆ.

ಸುಮಾರು 33 ಲಕ್ಷದಷ್ಟು ಭಾರತೀಯ ವಲಸಿಗ ಸಮುದಾಯವು ಯುಎಇಯ ಅತಿದೊಡ್ಡ ಜನಾಂಗೀಯ ಸಮುದಾಯವಾಗಿದ್ದು, ದೇಶದ ಜನಸಂಖ್ಯೆಯ ಸುಮಾರು ಶೇ. 30ರಷ್ಟಿದೆ. ಭಾರತದ ರಾಜ್ಯಗಳಲ್ಲಿ ಕೇರಳವನ್ನು ಪ್ರತಿನಿಸುವವರು ಯುಎಇಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ತಮಿಳುನಾಡು ಮತ್ತು ಆಂಧ್ರಪ್ರದೇಶ ನಂತರದ ಸ್ಥಾನಗಳಲ್ಲಿವೆ.

ಏಕಾಏಕಿ ಎದುರಾದ ಕೊರೋನಾ ವೈರಸ್ ಸೋಂಕಿನಿಂದಾಗಿ ಸ್ವದೇಶಕ್ಕೆ ಮರಳಲು ತಮ್ಮ ದೇಶವಾಸಿಗಳು ಮಾಡಿದ ಮನವಿಗೆ ಅನೇಕ ರಾಷ್ಟ್ರಗಳು ಸ್ಪಂದಿಸದ ಕಾರಣ ಈ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಯುಎಇ ಸರ್ಕಾರದ ಉನ್ನತ ಅಕಾರಿಯೊಬ್ಬರು ತಿಳಿಸಿದ್ದಾರೆ .

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ