ಏಪ್ರಿಲ್ 20 ಪ್ರಮುಖ ಏಕೆ?

ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಪ್ರಕಾರ ಏಪ್ರಿಲ್ 20 ದೇಶದ ಜನರಿಗೆ ಪ್ರಮುಖವಾಗಿದೆ. ಏಪ್ರಿಲ್ 20ರಂದು ದೇಶದ ಪ್ರತಿ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ರಾಜ್ಯಗಳ ಪರಿಸ್ಥಿತಿ ಗಮನಿಸಿ ನಿಬಂಧನೆ ಸಡಿಲಗೊಳಿಸಲಾಗುವುದು. ಅದರಲ್ಲೂ, ಕೊರೋನಾದಿಂದ ಮುಕ್ತವಾದ, ಪ್ರಕರಣ ಹೆಚ್ಚಳವಾಗದ, ವಿಸ್ತರಣೆಯಾಗದ ಪ್ರದೇಶಗಳಲ್ಲಿ ನಿಯಮ ಸಡಿಲಗೊಳಿಸಲಾಗುವುದು.

ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ಬಡಕಾರ್ಮಿಕರಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗುತ್ತಿದ್ದು, ಅವರ ಜೀವನೋಪಾಯ ಉಳಿಸುವ ಪ್ರಯತ್ನ ಇದಾಗಿದೆ ಎಂದಿದ್ದಾರೆ. ಕೊರೋನಾ ಹಾಟ್‍ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಸಡಿಲಗೊಳಿಸಲಾಗುವುದು. ಕೆಲವು ದಿನಗಳ ಪರಿಸ್ಥಿತಿ ಅವಲೋಕಿಸಿ ಆ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಮುಂದುವರಿಸಲಾಗುವುದು ಇಲ್ಲ ಮತ್ತೆ ನಿರ್ಬಂಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ