ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್

ಮೈಸೂರು, ಏ.6- ದೇಶದಾದ್ಯಂತ ಕೊರೊನಾ ಮಹಾಮರಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣ ಸುರಕ್ಷತಾ ಟನಲ್ ಸ್ಥಾಪಿಸಲಾಗಿದೆ.

ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ರೋಗಿಗಳು ಬರುತ್ತಾರೆ. ಅವರ್ಯಾರಿಗೂ ಕೊರೊನಾ ತಗುಲದಿರಲಿ ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಈ ಟನಲ್ ಹಾಕಲಾಗಿದೆ.

ವೈದ್ಯರು, ನರ್ಸ್‍ಗಳು ಸೇರಿದಂತೆ ಆಸ್ಪತ್ರೆಗೆ ಬರುವ ಪ್ರತಿಯೊಬ್ಬರೂ ಈ ಟನಲ್ ಹಾದು ಹೋಗಬೇಕು. ರೋಗ ನಿರೋಧಕ ಔಷಧಿಯನ್ನು ಇಲ್ಲಿ ಸಿಂಪಡಿಸಲಾಗುತ್ತದೆ ಎಂದು ಪಾಲಿಕೆ ವೈದ್ಯಾಧಿಕಾರಿ ನಾಗರಾಜು, ಹೆಚ್ಚುವರಿ ಆಯುಕ್ತ ಶಶಿಕುಮಾರ್, ಕ್ಲೀನ್ ಮೈಸೂರು ಗ್ರೂಪ್‍ನ ರಮೇಶ್ ಕಿಕ್ಕೇರಿ ತಿಳಿಸಿದ್ದಾರೆ. ಇದರಿಂದ ಸೋಂಕು ಹರಡುವುದು ತಪ್ಪಲಿದೆ ಎಂದು ಹೇಳಿದ್ದಾರೆ.

ಇನ್ನೊಂದು ಇದೇ ಮಾದರಿ ಟನಲ್ ಅನ್ನು ಎಂ.ಜಿ.ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲೂ ಅಳವಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ