ಸಭೆಗೆ ಹೋಗಿದ್ದ 17 ಮಂದಿ ಮೈಸೂರಿನವರು ಇನ್ನೂ ವಾಪಾಸ್ ಬಂದಿಲ್ಲ, ಅವರಿಗಾಗಿ ಹುಡುಕಾಟ ಧಾರ್ಮಿಕ ಸಭೆಗೆ ಹೋಗಿದ್ದ ಮೈಸೂರಿನ 45 ಮಂದಿಗೆ ಹೋಂ ಕ್ವಾರಂಟೈನ್

ಮೈಸೂರು: ದೆಹಲಿಯಲ್ಲಿ ಇತ್ತೀಚೆಗೆ ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಮೈಸೂರು ಜಿಲ್ಲೆಯಿಂದ 75 ಮಂದಿ ಹೋಗಿ ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಿಂದ ದೆಹಲಿಗೆ ಹೋಗಿದ್ದ 75 ಮಂದಿಯಲ್ಲಿ ಮೈಸೂರು ನಗರದಿಂದ 62 ಮಂದಿ ದೆಹಲಿಗೆ ಹೋಗಿದ್ದು, ಅದರಲ್ಲಿ 45 ಮಂದಿ ವಾಪಸ್ ಬಂದಿದ್ದಾರೆ. 17 ಮಂದಿ ನಗರದ ನಿವಾಸಿಗಳು ಮೈಸೂರಿಗೆ ಬಂದೇ ಇಲ್ಲ ಎಂದರು.

ವಾಪಾಸ್ ಬಂದಿರುವ 45 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಗ್ರಾಮೀಣ ಪ್ರದೇಶದ 13 ಮಂದಿ ಇದ್ದಾರೆ. ಹೆಚ್.ಡಿ ಕೋಟೆ 6, ಬನ್ನೂರಲ್ಲಿ ಒಬ್ಬರನ್ನು ಪಿರಿಯಾಪಟ್ಟಣದಲ್ಲಿ ಹೋಂ ಕ್ವಾರಂಟೈನ್‍ಲ್ಲಿ ಇಡಲಾಗಿದೆ. ದೆಹಲಿ, ಬೆಂಗಳೂರಿನಲ್ಲಿ ತಲಾ ಇಬ್ಬರು ಹೋಂ ಕ್ವಾರಂಟೈನ್‍ಲ್ಲಿದ್ದರೆ. ಮೈಸೂರಿನಿಂದ ದೆಹಲಿಯ ಸಭೆಗೆ ಹೋಗಿದ್ದ ಒಟ್ಟು 75 ಮಂದಿಯಲ್ಲಿ ಯಾರೊಬ್ಬರಿಗೂ ಕೊರೋನಾ ವೈರಸ್ ಸೋಂಕು ತಗುಲಿಲ್ಲ. ಆದರೂ ಕೂಡ ಮುಂಜಾಗ್ರತಾ ಕ್ರಮದಿಂದ ಅವರನ್ನು ಕ್ವಾರಂಟೈನ್‍ಲ್ಲಿ ಇಡಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ