ರಾಜ್​ಪಥ್​ನಲ್ಲಿ ರಾಷ್ಟ್ರಪತಿ ಧ್ವಜಾರೋಹಣ; ಭಾರತ ಸೇನೆಯಿಂದ ಶಕ್ತಿ ಪ್ರದರ್ಶನ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ರಾಜ್ಪಥ್ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಧ್ವಜಾರೋಹಣ ಮಾಡಿದರುಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ಯುದ್ಧ ಸ್ಮಾಕರದ ಬಳಿ ನಮನ ಸಲ್ಲಿಸಲಿದ್ದರು

ರಾಜ್​ಪಥ್​ನಿದಿಂದ ಇಂಡಿಯಾ ಗೇಟ್​ ತನಕ ಸೇನಾ ಪರೇಡ್​ ನಡೆಯಿತು. ಈ ಮೂಲಕ ಸೇನೆಯ ಶಕ್ತಿ ಅನಾವರಣಗೊಂಡಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ 10 ಗಂಟೆಯಿಂದ ಪಥಸಂಚಲನ ಆರಂಭವಾಯಿತು. ಈ ಬಾರಿ ಪಥಸಂಚಲನದಲ್ಲಿ ಒಟ್ಟು 22 ಸ್ತಬ್ಧ ಚಿತ್ರಗಳು ಸಾಗಿದವು. 16 ರಾಜ್ಯಗಳ ಸ್ತಬ್ಧಚಿತ್ರ ಹಾಗೂ 6 ಕೇಂದ್ರ ಸರ್ಕಾರದ ವಿವಿಧ ಸ್ತಬ್ಧಚಿತ್ರ ರಾಜ್​ಪಥ್​​ನಲ್ಲಿ ಸಾಗಿದ್ದು ವಿಶೇಷ.

ಭಾರತ ಸೇನೆಯ ಕ್ಷಿಪಣಿಗಳು, ಕ್ಷಿಪಣಿ ವಾಹನಗಳು, ವೀರಯೋಧರ ಸಾಹಸ ಪ್ರದರ್ಶನ ನಡೆಯಿತುದೆ. ಜೊತೆಗೆ ಭಾರತ ಸೇನೆಗೆ ಇತ್ತೀಚೆಗೆ ಸೇರ್ಪಡೆಯಾದ ಚಿನೂಕ್​ ಮತ್ತು ಅಪಾಚೆ ಹೆಲಿಕಾಪ್ಟರ್​​​​​​ ಆಗಸದಲ್ಲಿ ಕಸರತ್ತು ನಡೆಸಿದವು. ಮಿಷನ್​ ಶಕ್ತಿ’.. ಭೀಷ್ಮ ಟ್ಯಾಂಕರ್ ರಾಜಪಥ್​​ನಲ್ಲಿ ಘರ್ಜಿಸಿತು.

ಗಣರಾಜ್ಯೋತ್ಸವಕ್ಕೆ ಉಗ್ರರ ಬೆದರಿಕೆ ಇರೋ ಹಿನ್ನಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ಪೊಲೀಸರು, ಮಿಲಿಟರಿ ಪಡೆ, ಎನ್​ಎಸ್​ಜಿ ಪಡೆಗಳು ಭದ್ರತೆ ಒದಗಿಸಿದ್ದವು. ಬೆಳಗ್ಗೆ 10 ರಿಂದ 12.30ರವರೆಗೆ ದೆಹಲಿಯಿಂದ ಯಾವ ವಿಮಾನಗಳು ಹಾರಾಟ ನಡೆಸಲಿಲ್ಲ.. ಪ್ರಮುಖ ಸ್ಥಳಗಳಲ್ಲೆಲ್ಲಾ ಸಾವಿರಾರು ಸಿಸಿಕ್ಯಾಮೆರಾಗಳನ್ನ ಅಳವಡಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ