ಜಗನ್ನಾಥ ಭವನದಲ್ಲಿ ಸಚೀವರಿಂದ ಪ್ರತಿದಿನ ಅಹವಾಲು ಸ್ವೀಕಾರ

ಬೆಂಗಳೂರು : ಪಕ್ಷ ಮತ್ತು ಸರ್ಕಾರದ ನಡುವೆ ಉಂಟಾಗಿದ್ದ ನಿರ್ವಾತ ಸನ್ನ್ನಿವೇಶವನ್ನು ನಿವಾರಿಸಲು ಭಾರತೀಯ ಜನತಾ ಪಕ್ಷ ಮುಂದಾಗಿದೆ.

ಹೊಸ ಸರ್ಕಾರ ಬಂದಿರುವ ಹಿನ್ನಲೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರ ಅವಹಾಲುಗಳನ್ನು ಆಲಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದಾಗಿದ್ದು, ಪ್ರತಿ ದಿನ ಜಗನ್ನಾಥ ಭವನದಲ್ಲಿ ಸಚಿವರೊಬ್ಬರು ಉಪಸ್ಥಿತರಿದ್ದು ಅವಹಾಲುಗಳನ್ನು ಆಲಿಸಲಿದ್ದಾರೆ. ಮುಖ್ಯಮಂತ್ರಿ ಸೂಚನೆಯಂತೆ ಈ ಪದ್ಧತಿಯನ್ನು ಬಿಜೆಪಿ ಜಾರಿಗೊಳಿಸಿದೆ.

ಇಂದಿನಿಂದ ಆರಂಭವಾದ ಈ ಪದ್ಧತಿಯಂತೆ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಜಗನ್ನಾಥ ಭವನಕ್ಕೆ ನಿಗಧಿಯಂತೆ ಸಂಜೆ 3 ರಿಂದ 5 ಗಂಟೆಯವರೆಗೆ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಮೂಲಕ ಪಕ್ಷಕ್ಕೆ ದುಡಿದ ಕಾರ್ಯಕರ್ತರ ಅವಶ್ಯಕತೆಗಳನ್ನು ಹಾಗೂ ಕೊರತೆಗಳು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕರ್ತರು, ಪದಾಧಿಕಾರಿಗಳು ಸಹ ಸಮಾಧಾನವಾಗಿ ಖುಷಿಯಾಗಿ ಒಂದು ಗಂಟೆ ಕಾಲ ವಿಚಾರವನ್ನು ಹಂಚಿಕೊಂಡರು. ಈ ರೀತಿಯಾಗಿ ಮೊದಲನೆ ದಿನವನ್ನು ಲಕ್ಷಣ ಸವದಿಯವರು ಯಶಸ್ವಿಗೊಳಿಸಿದ ಕೀರ್ತಿಗೆ ಪಾತ್ರರಾಗಿ ಪದಾಧಿಕಾರಿಗಳ ಸಮಾಧಾನಕ್ಕೂ ಕಾರಣರಾದರು.

ಉಪಚುನಾವಣೆ ಪ್ರತಿಕ್ರಿಯೆ:
ರಾಜೂಕಾಗೆ ತಮ್ಮ ಸ್ನೇಹಿತರಾಗಿದ್ದು ಅವರೊಂದಿಗೆ ಮಾತನಾಡಿದ್ದೇನೆ ಅವರು ಬಿಜೆಪಿ ಬಿಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಪ್ರತಿಕ್ರಿಯಿಸಿದ್ದಾರೆ. ಅಥಣಿಯಲ್ಲಿ ಸೋತಿದ್ದರೂ ಉಪ ಮುಖ್ಯಮಂತ್ರಿಯಾಗಿರುವ ತಾವು ಉಪಚುನಾವಣೆಗೆ ಸ್ಪರ್ಧಿಸುವ ಸಂಬಂಧ ಪಕ್ಷ ತಿರ್ಮಾನಿಸುತ್ತದೆ. ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಇದೇ ವೇಳೆ ಡಿ.ಕೆ.ಶಿವಕುಮಾರ ಮೈಸೂರಿನಲ್ಲಿ ಅನರ್ಹರ ಬಗ್ಗೆ ಮಾತನಾಡಿದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅವರೊಬ್ಬ ಉತ್ತಮ ವ್ಯಕ್ತಿ ಆದರೆ, ಅವರು ಮಾತನಾಡುವ ವಿವರಗಳು ನಮ್ಮ ಬಳಿ ದೊರೆತ್ತಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ