ಬೆಂಗಳೂರಲ್ಲಿ ಏಕಕಾಲಕ್ಕೆ 11 ಕಡೆ ಐಟಿ ದಾಳಿ: ಒಪ್ಪೋ ಕಂಪನಿ, ಉದ್ಯಮಿಗಳ ಮೇಲೆ ಎಫ್‌ಐಆರ್‌

ಬೆಂಗಳೂರು: ಮೆಟ್ರೋ ನಗರಿ ಬೆಂಗಳೂರಲ್ಲಿ ಐಟಿ ದಾಳಿ ಮುಂದುವರಿದಿದ್ದು, ತೆರಿಗೆ ವಚನೆ ಆರೋಪದಡಿ ವಿವಿಧ ಉದ್ಯಮಿಗಳ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆಯೇ ದಾಳಿ ನಡೆಸಿದ್ದಾರೆ.

ಬೆಳಗ್ಗೆ 7 ಗಂಟೆಯಿಂದಲೇ ಐಟಿ ದಾಳಿ ಆರಂಭವಾಗಿದ್ದು, ಉದ್ಯಮಿಗಳಿಗೆ ಆದಾಯ ತೆರಿಗೆ ಇಲಾಖೆ ಶಾಕ್‌ ನೀಡಿದೆ. ಏಕಕಾಲದಲ್ಲಿ 11 ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬೆಂಗಳೂರು-ಚೆನ್ನೈ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಒಪ್ಪೋ ಕಂಪನಿ ಸೇರಿದಂತೆ ಹಲವು ಕಂಪನಿಗಳ ಮೇಲೆ ಹಾಗೂ ಉದ್ಯಮಿಗಳ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ