ಚಾಮುಂಡೇಶ್ವರಿ ತಾಯಿ ಎದುರು ಪ್ರಮಾಣ: ವಿಶ್ವನಾಥ್‌ ಸವಾಲು ಸ್ವೀಕರಿಸಿದ ಸಾ.ರಾ. ಮಹೇಶ್‌

ಮೈಸೂರುಚಾಮುಂಡೇಶ್ವರಿ ತಾಯಿ ಎದುರು ಆಣೆ – ಪ್ರಮಾಣ ರಾಜಕೀಯ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಅನರ್ಹ ಶಾಸಕ ಅಡಗೂರು ಎಚ್. ವಿಶ್ವನಾಥ್ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಧ್ಯೆ ಆಣೆ ಪ್ರಮಾಣ ರಾಜಕೀಯ ಮತ್ತೆ ಜೋರಾಗಿದೆ.

ನಾಳೆ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡುವ ಅನರ್ಹ ಶಾಸಕ ಅಡಗೂರು ಎಚ್. ವಿಶ್ವನಾಥ್ ಅವರ ಸವಾಲನ್ನು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸ್ವೀಕರಿಸಿದ್ದಾರೆ. ಅಲ್ಲದೆ, ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಹೇಳಿದ ಸಾ.ರಾ.ಮಹೇಶ್, “ನಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ನಾನು ಹಾಗೂ ಕುಟುಂಬದವರು ಯಾರೂ ಹಣ ಪಡೆದಿಲ್ಲ” ಎನ್ನುವುದನ್ನು ಎಚ್‌. ವಿಶ್ವನಾಥ್‌ ಚಾಮುಂಡೇಶ್ವರಿ ದೇವಿಯ ಮುಂದೆ ಹೇಳಿದರೆ ನಾನು ರಾಜ್ಯದ ಜನತೆ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಅನರ್ಹ ಶಾಸಕ ಸಾ.ರಾ. ಮಹೇಶ್‌ ಸವಾಲನ್ನು ಸ್ವೀಕರಿಸಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಲಿ ಎಂದು ಈ ಹಿಂದೆ ಸಾರಾ ಹೇಳಿದ್ದರು. ಅದಕ್ಕೆ ಮಂಗಳವಾರ ವಿಶ್ವನಾಥ್ ಒಪ್ಪಿ ಅಕ್ಟೋಬರ್ 17ರಂದು ಬರಲಿ ಎಂದು ಹೇಳಿದ್ದರು. ಇದನ್ನು ಇದೀಗ ಸಾ. ರಾ. ಮಹೇಶ್‌ ಸ್ವೀಕರಿಸಿದ್ದಾರೆ.

ಅಲ್ಲದೆ, ಈ ಹಿಂದೆ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ ಕಾರಣಕ್ಕಾಗಿ ನಾನು ಸೆಪ್ಟೆಂಬರ್ 18 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮಾಜಿ ಸಿಎಂ ಕುಮಾರ ಸ್ವಾಮಿ ಅವರು ರಾಜೀನಾಮೆ ಹಿಂಪಡೆಯುವಂತೆ ನನಗೆ ಸಮಾಧಾನ ಮಾಡಿದ್ದರೂ ಸಹ ನಾನು ಇನ್ನೂ ರಾಜೀನಾಮೆ ಹಿಂದಕ್ಕೆ ಪಡೆದಿಲ್ಲ
ಎಂದೂ ಸುದ್ದಿಗೋಷ್ಠಿ ವೇಳೆ ಸಾ.ರಾ. ಮಹೇಶ್‌ ಹೇಳಿದ್ದಾರೆ.

ಇನ್ನು, ಹುಣಸೂರಿನಲ್ಲಿ ವಿಶ್ವನಾಥ್ ಅಥವಾ ಅವರ ಕುಟುಂದವರು ಉಪ ಚುನಾವಣೆಯಲ್ಲಿ ನಿಲ್ಲುವುದಿಲ್ಲ. ಬೆಂಗಳೂರು ಮೂಲದವರು ನಿಲ್ಲುತ್ತಾರೆ. ಈ ಕುರಿತು ಸಿಎಂ ಯಡಿಯೂರಪ್ಪ ಮುಂದೆ ಮಾತುಕತೆ ಆಗಿದೆ ಎಂದೂ ಸಾ. ರಾ. ಮಹೇಶ್‌ ಮೈಸೂರಿನಲ್ಲಿ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ