ಅಕ್ಟೋಬರ್ 15 ರವರೆಗೆ ಡಿ.ಕೆ.ಶಿವಕುಮಾರ್ ನ್ಯಾಯಾಂಗ ಬಂಧನ ವಿಸ್ತರಣೆ

ನವದೆಹಲಿಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಮಂಗಳವಾರ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸಿದೆ.

ಇಂದಿನ ವಿಚಾರಣೆಯ ವೇಳೆ, ತಿಹಾರ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಕುಮಾರನನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವಂತೆ ಇಡಿ ವಕೀಲರು ಅರ್ಜಿಯನ್ನು ಸಲ್ಲಿಸಿದರು. ಅಕ್ಟೋಬರ್ 4 ಮತ್ತು 5 ರಂದು ಜೈಲಿನಲ್ಲಿರುವ ಶಿವಕುಮಾರ್ ಅವರನ್ನು ವಿಚಾರಣೆ ನಡೆಸಲು ನ್ಯಾಯಾಲಯ ಇಡಿಗೆ ಅನುಮತಿ ನೀಡಿತು.

ಸೆಪ್ಟೆಂಬರ್ 3 ರ ಸಂಜೆ ಡಿಕೆಶಿ ಅವರನ್ನು ಇಡಿ ಬಂಧಿಸಿತ್ತು, ನಂತರ ಅವರನ್ನು ದೆಹಲಿ ನ್ಯಾಯಾಲಯವು 10 ದಿನಗಳ ಕಾಲ ಇಡಿ ಕಸ್ಟಡಿಗೆ ಕಳುಹಿಸಿತು. ತೆರಿಗೆ ವಂಚನೆ, ಹವಾಲಾ ವಹಿವಾಟು ವಿಚಾರವಾಗಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣ ದಾಖಲಾಗಿತ್ತು.

ಆರಂಭಿಕ ತನಿಖೆಯ ಸಮಯದಲ್ಲಿ ಐ-ಟಿ ಇಲಾಖೆಯು ದೆಹಲಿ ಮತ್ತು ಬೆಂಗಳೂರಿನಾದ್ಯಂತ ವ್ಯಕ್ತಿಗಳ ಜಾಲವನ್ನು ಐಟಿ ಇಲಾಖೆ ಭೇದಿಸಿ ಮನಿ ಲಾಂಡರಿಂಗ್ ಮತ್ತು ಹವಾಲಾ ಕಾರ್ಯಾಚರಣೆಗಳನ್ನು ಪತ್ತೆ ಹಚ್ಚಿತ್ತು

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ