ಕುಷ್ಟಗಿ ರೈಲ್ವೆ ಮೇಲ್ಸೇತುವೆ ಆರ್‌ಒಬಿ ಕಾಮಗಾರಿಗೆ ರಾಜ್ಯ ಸರ್ಕಾರ ೧೩ ಕೋಟಿ ಬಿಡುಗಡೆ

ಕೊಪ್ಪಳ ಸೆ 26:
ಕೊಪ್ಪಳ ನಗರದ ಕುಷ್ಟಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಿದ್ದ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದೇ ವಿಳಂಬವಾಗಿದ್ದ ಕಾಮಗಾರಿಗೆ ಇದೀಗ ಚಾಲನೆ ಸಿಗಲಿದೆ. ರಾಜ್ಯ ಸರ್ಕಾರ ತನ್ನಪಾಲಿನ 13 ಕೋಟಿ ಹಣ ಬಿಡುಗಡೆ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸೂಚಿಸಿದೆ.

ಈ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪಾಪಣ್ಣ ಅವರು ಆದೇಶ ಹೊರಡಿಸಿದ್ದಾರೆ ಎಂದು ಕೊಪ್ಪಳ ಬಿಜೆಪಿ ಮುಖಂಡರಾದ ಅಮರೇಶ ಕರಡಿ ತಿಳಿಸಿದ್ದಾರೆ.

“ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಎನ್ನುವುದು ಅದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಕಾಂಗ್ರೆಸ್‌ನಿಂದ ಅಭಿವೃದ್ಧಿ ನಿರೀಕ್ಷೆ ಅಸಾಧ್ಯ. ೨೦೧೬-೧೭ರಲ್ಲೇ ಆಗಬೇಕಿದ್ದ ಕಾರ್ಯಕ್ಕೆ ಅನುದಾನ ನೀಡದೇ ವಿಳಂಬ ನೀತಿ ಅನುಸರಿಸಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡು ತಿಂಗಳಲ್ಲೆ ಈ ಭಾಗದ ಜನತೆ ಬೇಡಿಕೆಗೆ ಯಡಿಯೂರಪ್ಪ ಅವರ ಸರ್ಕಾರ ಸ್ಪಂದಿಸಿ ಹಣ ಬಿಡುಗಡೆ ಮಾಡುತ್ತಿರುವುದು ಸಂಸತದ ವಿಷಯವಾಗಿದೆ”  ಎಂದು ಅವರು ಹೇಳಿಕೆ ನೀಡಿದರು

ಕೊಪ್ಪಳ ನಗರದಿಂದ ಕುಷ್ಟಗಿ ಸಂಪರ್ಕಿಸುವ ಹೆದ್ದಾರಿ ಮೇಲೆ ರೈಲ್ವೆ ಹಳಿ ಹಾಯ್ದು ಹೋಗಿರುವ ಕಾರಣ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಕಾರಣದಿಂದಾಗಿ ಕುಷ್ಟಗಿ ಲೇವಲ್ ಕ್ರಾಸಿಂಗ್ ನಂ-66ಕ್ಕೆ ರೈಲ್ವೆ ಮೇಲ್ಸುತೆ ಅವಶ್ಯಕತೆ ಇತ್ತು. ಆರ್‌ಒಬಿ ನಿರ್ಮಾಣಕ್ಕೆ ಒಟ್ಟು ೨೩.೬೫ ಕೋಟಿ ಅವಶ್ಯಕತೆ ಇದೆ ಎಂದು 2016ರಲ್ಲೆ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ ಅವರು ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕಾಮಗಾರಿಯಲ್ಲಿ ಕೇಂದ್ರ ಸರ್ಕಾರದ 10.51 ಕೋಟಿ ಹಣ ಬಿಡಿಗಡೆ ಮಾಡಿತ್ತು. ಆದರೆ ರಾಜ್ಯ ಸರ್ಕಾರ ತನ್ನ ಪಾಲಿನ 13.13 ಕೋಟಿ ಹಣವನ್ನು ಅಂದಿನಿಂದ ಇದುವರೆಗೂ ಬಿಡುಗಡೆ ಮಾಡದೇ ವಿಲಂಬ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ