ಚಂದ್ರಯಾನ-2: ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಯಶಸ್ವಿ

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ನ ಮತ್ತೊಂದು ಹಂತ ಕೂಡ ಯಶಸ್ವಿಯಾಗಿದ್ದು, ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಪ್ರಕ್ರಿಯೆಯನ್ನು ವಿಜ್ಞಾನಿಗಳು ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ನಿನ್ನೆಯಷ್ಟೇ ಚಂದ್ರಯಾನ 2 ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು, ಇದೀಗ ಚಂದ್ರನ ಮೇಲ್ಮನತ್ತ ಮೂನ್ ಲ್ಯಾಂಡರ್ ಅನ್ನು ತಳ್ಳುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಈ ಕುರಿತಂತೆ ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಬೆಳಗ್ಗೆ 8.50ರ ಸುಮಾರಿನಲ್ಲಿ ವಿಜ್ಞಾನಿಗಳು ಚಂದ್ರನ ಮೇಲ್ಮನತ್ತ ಮೂನ್ ಲ್ಯಾಂಡರ್ ಅನ್ನು ತಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಮೂನ್ ಲ್ಯಾಂಡರ್ ನ ಎಂಜಿನ್ ಅನ್ನು ಸುಮಾರು 4 ಸೆಕೆಂಡ್ ಗಳ ಕಾಲ ಚಾಲನೆ ಮಾಡಲಾಯಿತು.

ಅದರಂತೆ ಮೂನ್ ಲ್ಯಾಂಡರ್ ಚಂದ್ರನ ಮೇಲ್ಮೈನ 109 x 120 ಕಿ.ಮೀ ವ್ಯಾಪ್ತಿಯೊಳಗೆ ತಳ್ಳಲ್ಪಟ್ಟಿದೆ. ಇದು ಮೊದಲ ಹಂತದ ಪ್ರಕ್ರಿಯೆಯಾಗಿದ್ದು, ನಾಳೆ ನಡೆಯಲಿರುವ 2ನೇ ಹಂತದ ಕಾರ್ಯಾಚರಣೆಯಲ್ಲಿ ಮತ್ತೆ ಮೂನ್ ಲ್ಯಾಂಡರ್ ಎಂಜಿನ್ ಅನ್ನು ಚಾಲನೆ ಮಾಡುವ ಮೂಲಕ  39  X 110ಕಿ,ಮೀ ವ್ಯಾಪ್ತಿಯೊಳಗೆ ತಳ್ಳಲಾಗುತ್ತದೆ. ಇದು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ