ಗುಲ್ಬರ್ಗ ತೊಗರಿಬೇಳೆಗೆ ದೊರಕಿತು ಭೌಗೋಳಿಕ ಸೂಚನೆ (GI Tag)

ಬೆಂಗಳೂರು ಆ 25: ಸಾಮಾನ್ಯವಾಗಿ ಗುಲ್ಬರ್ಗಾ ಬಗ್ಗೆ ಯೋಚಿಸುವಾಗ, ಜನರ ಮನಸ್ಸಿನಲ್ಲಿ ಬರುವುದು ಆ ಜಿಲ್ಲೆಯಿಂದ ಉತ್ಪತ್ತಿಯಾಗುವ ವಿಶೇಷ ತೊಗರಿಬೇಳೆ. ಈಗ ಅದೇ ತೊಗರಿಬೇಳೆಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೋಚರತೆ ಸಿಕ್ಕಿದೆ.

ಭಾರತದ ಬೌದ್ಧಿಕ ಆಸ್ತಿ (ಇಂಟಲೆಕ್ಚುಯಲ್ ಪ್ರಾಪರ್ಟಿ ಓಫ್ ಇಂಡಿಯಾ) ಈಗ ಈ ಗುಲ್ಬರ್ಗಾ ತೊಗರಿಬೇಳೆಗೆ ಭೌಗೋಳಿಕ ಸೂಚಕ (G I ) ಟ್ಯಾಗ್ ನೀಡಿದೆ. ಈ ಟ್ಯಾಗ್ ಅನ್ನು ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ನೋಂದಾಯಿಸಲಾಗಿದೆ ಎಂದು ವಿಶ್ವೇಶ್ವರಯ್ಯ ವ್ಯಾಪಾರ ಪ್ರಚಾರ ಕೇಂದ್ರ (ವಿಟಿಪಿಸಿ) ತನ್ನ ಟ್ವೀಟ್ ನಲ್ಲಿ ತಿಳಿಸಿದೆ

 

GI ನೋಂದಣಿಯಿಂದ ಅದರ ಬೇಡಿಕೆ ಮತ್ತು ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. GIಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷ ಮೌಲ್ಯವನ್ನು ಹೊಂದಿದ್ದು ರಾಫ್ತು ಮಾರಾಟಕ್ಕೆ ಉತ್ತಮ ಅವಕಾಶಗಳನ್ನು ಕಂಡುಕೊಳ್ಳುತ್ತವೆ.

ಕರ್ನಾಟಕವು ಈಗ ಒಟ್ಟು 354 ನೋಂದಣಿಗಳಲ್ಲಿ 46 ಜಿಐ ಟ್ಯಾಗ್‌ಗಳನ್ನು ನೋಂದಾಯಿಸಿದೆ. ಇದು ಇಡೀ ಭಾರತದೇಶದಲ್ಲಿ ಅತಿ ಹೆಚ್ಚು ನೋಂದಣಿಗಳಾಗಿದ್ದು, ತಮಿಳುನಾಡು (34), ಮಹಾರಾಷ್ಟ್ರ (33), ಕೇರಳ(32) ಮತ್ತು ಉತ್ತರಪ್ರದೇಶ(28) ರಾಜ್ಯಗಳು ಕರ್ನಾಟಕದ ನಂತರ ಬರುವುದು. ಕರ್ನಾಟಕದ 46 ಉತ್ಪನ್ನಗಳಲ್ಲಿ 22 ಕೃಷಿ, 20 ಕರಕುಶಲ ವಸ್ತುಗಳು, ಉತ್ಪಾದನೆಯಲ್ಲಿ 3 ಮತ್ತು ಆಹಾರ ಸಾಮಗ್ರಿಗಳಲ್ಲಿ 1 ಸೇರಿರುವುದು.

ವಿಟಿಪಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್ ಆರ್ ಸತೀಷಾ ಅವರು “ಕುಶಲಕರ್ಮಿಗಳು ಮತ್ತು ಗ್ರಾಹಕರಲ್ಲಿ ಜಿ ಐಗಳ ಬಗ್ಗೆ ಸೂಕ್ಷ್ಮತೆಯ ಅವಶ್ಯಕತೆಯಿದೆ. ಅನೇಕರಿಗೆ ಈ ಉತ್ಪನ್ನಗಳ ಬಗ್ಗೆ ಜ್ಞಾನ ಮತ್ತು ಪ್ರಾಮುಖ್ಯತೆ ತಿಳಿದಿಲ್ಲ” ಎಂದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ