ನುಚ್ಚುನೂರಾದ ಪೋಷಕರ ಆಸೆ

ಬೆಂಗಳೂರು,ಆ.21-ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿರುವ ಆರೋಪಿ ಪ್ರವೀಣ್ ಕುಟುಂಬದವರು ಮೂಲತಃ ಮಂಗಳೂರಿನವರು.

ಪೀಣ್ಯದ ಕಾರ್ಖಾನೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದು, ಸ್ವಯಂ ನಿವೃತ್ತಿ ಪಡೆದಿರುವ ಪ್ರವೀಣ್‍ನ ತಂದೆಗೆ ಈಗ 67 ವರ್ಷ, ತಾಯಿಗೆ 55 ವರ್ಷ. ಈ ದಂಪತಿಗೆ ಪ್ರವೀಣ್ ಏಕೈಕ ಪುತ್ರ.

ತಮ್ಮ ಒಬ್ಬನೇ ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಉದ್ಯೋಗ ಕೊಡಿಸಬೇಕೆಂದು ಪೋಷಕರು ಆಸೆ ಇಟ್ಟುಕೊಂಡಿದ್ದರು. ಈಗ ಅವರ ಆಸೆ ನುಚ್ಚುನೂರಾಗಿದೆ.

ತನ್ನ ಸ್ನೇಹಿತೆಗಾಗಿ ಆಕೆಯ ತಂದೆಯನ್ನೇ ಕೊಂದ ಎಂಬ ಆರೋಪದಲ್ಲಿ ಮಗ ಜೈಲು ಸೇರಿರುವುದರಿಂದ ಈ ವೃದ್ಧ ದಂಪತಿ ಈಗ ಕಂಗಾಲಾಗಿದ್ದಾರೆ.

ಸ್ವಯಂ ನಿವೃತ್ತಿಯಿಂದ ಬಂದ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದು, ಆದರಿಂದ ಬರುವ ಬಡ್ಡಿ ಹಣದಲ್ಲಿ ಜೀವನ ನಡೆಸುತ್ತಿರುವ ಈ ವೃದ್ಧ ದಂಪತಿಗೆ ದಿಕ್ಕು ತೋಚದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ