ದೆಹಲಿಯಲ್ಲಿ ಅಮಿತ್ ಶಾ-ಯಡಿಯೂರಪ್ಪ ಭೇಟಿ; ರಾಜ್ಯ ಸಚಿವರ ಪಟ್ಟಿಗೆ ಹೈಕಮಾಂಡ್​ ಮುದ್ರೆ ಒತ್ತುವ ಸಾಧ್ಯತೆ?

ನವದೆಹಲಿ; ಕಗ್ಗಂಟಾಗಿರುವ ರಾಜ್ಯ ಸಚಿವ ಸಂಪುಟ ರಚನೆಗೆ ಇಂದು ತೆರೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ಅಮಿತ್ ಶಾ ಭೇಟಿಗೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಜೆ 5 ಗಂಟೆಗೆ ಅವರನ್ನು ಭೇಟಿಯಾಗಿ ಸಂಪುಟ ರಚನೆ ಕುರಿತು ಚರ್ಚಿಸಲಿದ್ದು, ರಾಜ್ಯ ಸಚಿವರ ಪಟ್ಟಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುದ್ರೆ ಒತ್ತುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಈ ಹಿಂದೆಯೇ ಅಮಿತ್ ಶಾ ಕೇಳಿದ್ದರು. ಈ ಕುರಿತು ಪಕ್ಷದ ಹಿರಿಯ ನಾಯಕ ಜೆ.ಪಿ. ನಡ್ಡಾ ಜೊತೆಗೂ ಚರ್ಚೆ ನಡೆಸಿದ್ದ ಬಿಎಸ್​ವೈ ರಾಜ್ಯ ಆರ್​​ಎಸ್ಎಸ್​ ಘಟಕದ ಹಿರಿತಲೆ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೊತೆ ಶುಕ್ರವಾರ ಒಂದು ಸುತ್ತಿನ ಮಾತುಕತೆ ನಡೆಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ ಬಿಎಸ್​ವೈ ಆಪ್ತರೆಲ್ಲರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದ್ದು, ಪಕ್ಷ ನಿಷ್ಠರಿಗೆ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ಅನಿರೀಕ್ಷಿತ ಹೆಸರುಗಳು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಮೊದಲ ಹಂತದಲ್ಲಿ 15 ರಿಂದ 18 ಜನರಿಗೆ ಸಚಿವರಾಗಿ ಅವಕಾಶ ನೀಡಲಿದ್ದು, ಅಮಿತ್ ಶಾ ಈ ಪಟ್ಟಿಗೆ ಮುದ್ರೆ ಒತ್ತಿದ ನಂತರ ರಾಜಭವನಕ್ಕೆ ಮಾಹಿತಿ ರವಾನೆಯಾಗಲಿದೆ. ಎಲ್ಲರೂ ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆರ್. ಅಶೋಕ್ಒಕ್ಕಲಿಗ, ಪಕ್ಷ ನಿಷ್ಟ, ಹಿರಿತನ

ಕೆ.ಎಸ್. ಈಶ್ವರಪ್ಪ, ಕುರುಬ, ಪಕ್ಷ ನಿಷ್ಟ, ಹಿರಿತನ

ಅರವಿಂದ ಲಿಂಬಾವಳಿ, ಅಧ್ಯಕ್ಷ/ಮಂತ್ರಿ, ಬಿಎಸ್ ವೈ ಒತ್ತಡದ ಮೇರೆಗೆ

ಜೆ.ಸಿ. ಮಾಧುಸ್ವಾಮಿ, ಲಿಂಗಾಯತ, ಯಡಿಯೂರಪ್ಪ ಆಪ್ತ

ಗೋವಿಂದ ಕಾರಜೋಳ, ದಲಿತ(ಎಡಗೈ), ಪಕ್ಷ ನಿಷ್ಟೆ, ಹಿರಿತನ

ಶ್ರೀರಾಮುಲು, ವಾಲ್ಮೀಕಿ ಸಮುದಾಯದ ನಾಯಕ

ಉಮೇಶ್ ಕತ್ತಿ, ಲಿಂಗಾಯತ ಬಿಎಸ್ ವೈ ಆಪ್ತ

ಎಸ್ ಅಂಗಾರ, ಆರ್ಎಸ್ಎಸ್ ಹಿನ್ನೆಲೆ, ಹಿರಿತನ

ಎಂ. ಚಂದ್ರಪ್ಪ, ಹೊಳಲ್ಕೆರೆ, ದಲಿತ ಎಡಗೈ

ರಾಮದಾಸ್, ಬ್ರಾಹ್ಮಣ, ಪಕ್ಷ ನಿಷ್ಠ, ಆರ್ಎಸ್ಎಸ್ಹಿನ್ನೆಲೆ

ಕೆ.ಜಿ. ಬೋಪಯ್ಯ, ಒಕ್ಕಲಿಗ, ಹಿರಿತನ, ಆರ್ಎಸ್ಎಸ್ಹಿನ್ನೆಲೆ

ಜಿ.ಕರುಣಾಕರ ರೆಡ್ಡಿ, ಹೈಕಮಾಂಡ್ ಅಭ್ಯರ್ಥಿ

ಶಿವನಗೌಡ ನಾಯಕ, ಬಿಎಸ್ ವೈ ಆಪ್ತ,

ದತ್ತಾತ್ರೇಯ ಪಾಟೀಲ್, ಬೀದರ್ ಜಿಲ್ಲಾ ಪ್ರಾತಿನಿಧ್ಯ

ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಕೋಟಾ

ಎನ್. ರವಿಕುಮಾರ್, ಖರ್ಗೆ ಸೋಲಿನ ರೂವಾರಿ ಎಂಬ ಕಾರಣ

ಡಾ. ಸಿ.ಎನ್. ಅಶ್ವಥ್ ನಾರಾಯಣ, ಆಪರೇಷನ್ ಕಮಲದ ರೂವಾರಿ

ಸುನೀಲ್ ಕುಮಾರ್, ಈಡಿಗ, ಆರ್ಎಸ್ಎಸ್ಹಿನ್ನೆಲೆ, ಪಕ್ಷ ನಿಷ್ಟ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ