ಒಂದೇ ಕುಟುಂಬದ ಐವರ ಸಾಮೂಹಿಕ ಆತ್ಮಹತ್ಯೆ

ಚಾಮರಾಜನಗರ,ಆ.16-ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಗುಂಡ್ಲುಪೇಟೆ ನಗರದ ಸೆಂಟ್ ಜಾನ್ಸ್ ಸ್ಕೂಲ್ ಬಳಿಯ ಜಮೀನೊಂದರಲ್ಲಿ ಇಂದು ಬೆಳಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಮೃತರು ಓಂಕಾರ್ (38), ಪತ್ನಿ ನಿಖಿತಾ (28), ಪುತ್ರ ಆರ್ಯ ( 5), ಭಟ್ಟಾಚಾರ್ಯ (70), ಹೇಮಾ ( 55 ) ಎಂದು ಗುರುತಿಸಲಾಗಿದೆ. ಇವರು ಮೈಸೂರಿನ ದಟ್ಟಗಹಳ್ಳಿಯ ನಿವಾಸಿಗಳಾಗಿದ್ದು ಮೇಲ್ನೋಟಕ್ಕೆ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ರಾತ್ರಿ ಮೈಸೂರಿನಿಂದ ಬಂದ ಕುಟುಂಬ ಗುಂಡ್ಲುಪೇಟೆಯ ನಂದಿ ಲಾಡ್ಜ್ ನಲ್ಲಿ ಓಂ ಪ್ರಕಾಶ್ ಎಂಬುವರ ಹೆಸರಲ್ಲಿ ರೂಂ ಬುಕ್ ಮಾಡಿ ವಾಸ್ತವ್ಯ ಹೂಡಿದ್ದರು. ಬೆಳಗಿನ ಜಾವ ಐವರು ಗುಂಡ್ಲುಪೇಟೆ ಹೊರವಲಯಕ್ಕೆ ಬಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಗುರುವಾರ ರಾತ್ರಿ ಈ ಕುಟುಂಬ ಮೈಸೂರಿನಿಂದ ಬಂದಿದ್ದರು.ಮೈಸೂರಿನಿಂದ ಬಂದು ಗುಂಡ್ಲುಪೇಟೆ ನಂದಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಓಂ ಪ್ರಕಾಶ್ ಹೆಸರಿನಲ್ಲಿ ರೂಂ ಬುಕ್ ಮಾಡಲಾಗಿತ್ತು.ಬೆಳಗ್ಗಿನ ಜಾವ ಪಟ್ಟಣದ ಹೊರವಲಯಕ್ಕೆ ಬಂದು ಕುಟುಂಬದ ಐವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಐವರು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಬಂದಿಲ್ಲ.
ಮೃತರ ಕುಟುಂಬಸ್ಥರು ಕೆಲ ವರ್ಷಗಳ ಹಿಂದೆ ಡಾಟಾಬೇಸ್ ಕಂಪನಿ ನಡೆಸುತ್ತಿದ್ದರು.ಕಳೆದೆರೆಡು ವರ್ಷಗಳಿಂದ ಹಣಕಾಸಿನ ಸಮಸ್ಯೆಗೆ ಸಿಲುಕಿ ಕಂಪನಿ ಮುಚ್ಚಿದ್ದಾರೆ.

ಎರಡು ವರ್ಷಗಳಿಂದ ಸಾಲದ ಸುಳಿಗೆ ಮನನೊಂದಿದ್ದರು ಎನ್ನಲಾಗುತ್ತಿದೆ.ಡಾಟಾ ಬೇಸ್, ಅನಿಮೇಷನ್ ಕಂಪನಿ ನಡೆಸುತ್ತಿದ್ದ ಓಂಪ್ರಕಾಶ್ ಅವರಿಗೆ ಡಾಟಾ ಬೇಸ್ ಕಂಪನಿಯಿಂದ ಕೋಟ್ಯಂತರ ರೂ. ನಷ್ಟವಾಗಿತ್ತು.ಬಳಿಕ ಅನಿಮೇಷನ್ ಕಂಪನಿ ನಡೆಸುತ್ತಿದ್ದರು.ಅದರಲ್ಲೂ ನಷ್ಟವಾಗಿತ್ತು ಎನ್ನಲಾಗಿದೆ.

ಮೃತ ಓಂಕಾರ ಪ್ರಸಾದ್ ಕುಟುಂಬ ಮಂಗಳವಾರದಿಂದ ಎಲ್ಚೆಟ್ಟಿ ಗ್ರಾಮದ ಸ್ನೇಹಿತರ ಫಾಮ್ರ್ಹೌಸ್ನಲ್ಲಿ ಉಳಿದುಕೊಂಡಿದ್ದರು.ಗುರುವಾರ ಮಧ್ಯಾಹ್ನ ಪಟ್ಟಣದ ಮುಖ್ತಾರ್ ಮಾಂಸಾಹಾರಿ ಹೋಟೆಲ್ ನಿಂದ ಬಿರಿಯಾನಿಯನ್ನು ಪಾರ್ಸೆಲ್ ತಂದು ರಸ್ತೆಯ ಬದಿ ಊಟ ಮಾಡಿ ಹೋಗಿದ್ದರು.

ಬಳಿಕ ಡ್ರೈವರ್ ಚೇತನ್ಗೆ ನೀನು ಹೋಗಿ ಸಂಜೆ ಬಾ ನಾಳೆ (ಶುಕ್ರವಾರ) ಬೆಳಗ್ಗೆ ಸೇಲಂಗೆ ಹೋಗಬೇಕು ಎಂದು ಕಳುಹಿಸಿದ್ದಾರೆ.ಸಂಜೆ ಡ್ರೈವರ್ ಬಂದಾಗ ಗುರುವಾರ ರಾತ್ರಿ ಜೊತೆಯಲ್ಲಿ ಊಟ ಮಾಡಿದ್ದಾರೆ.ಬೆಳಗ್ಗೆ ಪೋನ್ ಮಾಡುತ್ತೇನೆ ರೆಡಿ ಇರು ಎಂದು ಹೇಳಿ ಕಳುಹಿಸಿದ್ದಾರೆ.

ಮುಂಜಾನೆ 3.30ಕ್ಕೆ ಓಂಕಾರ ಪ್ರಸಾದ್ ಡ್ರೈವರ್ಗೆ ಕರೆ ಮಾಡಿ ನಾನು ಜೀವನದಲ್ಲಿ ಸೋತಿದ್ದೇನೆ, ಇನ್ನೂ ಬದುಕುವುದಿಲ್ಲ. ನಿನ್ನೆ ಮಧ್ಯಾಹ್ನ ಬಿರಿಯಾನಿ ಊಟ ಮಾಡಿದ ಜಾಗದಲ್ಲಿ ಕಾರು ನಿಲ್ಲಿಸಿದ್ದೇನೆ. ಬಂದು ತೆಗೆದುಕೊಳ್ಳಿ ಎಂದ್ಹೇಳಿ ಕರೆ ಕಟ್ ಮಾಡಿದರು ಎಂದು ಡ್ರೈವರ್ ಚೇತನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತಪಟ್ಟ ಓಂಕಾರ್ ಪ್ರಸಾದ್ ಪತ್ನಿ ನಿಖಿತಾ ಗರ್ಭಿಣಿಯಾಗಿದ್ದರು ಎಂದು ತಿಳಿದು ಬಂದಿದೆ.ತಾತನ ತೆಕ್ಕೆಯಲ್ಲಿ ಮಲಗಿದ್ದ ಮಗ ಆರ್ಯನ್ಗೂ ಕೂಡ ಹಣೆಗೆ ಗುಂಡಿಕ್ಕಿ ಓಂಕಾರ್ ಪ್ರಸಾದ್ ಕೊಂದಿದ್ದಾರೆ. ಓಂಕಾರ್ ಪ್ರಸಾದನಿಗೆ ಮೂರು ಮಂದಿ ಗನ್ ಮ್ಯಾನ್ ಇದ್ದರು ಎನ್ನಲಾಗಿದ್ದು, ಓರ್ವ ಗನ್ ಮ್ಯಾನ್ ನಿಂದ ಪಿಸ್ತೂಲ್ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.

3 ದಿನಗಳ ಹಿಂದೆಯೆ ಮನೆ ಬಿಟ್ಟಿದ್ದ ಕುಟುಂಬ
ಮೈಸೂರು: ಗುಂಡ್ಲುಪೇಟೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರು ಇಲ್ಲಿನ ತಮ್ಮ ದಟ್ಟಗಳ್ಳಿಯ ನಿವಾಸವನ್ನು ಬೀಗ ಹಾಕಿಕೊಂಡು ಮೂರು ದಿನಗಳ ಹಿಂದೆಯೆ ತೆರಳಿದ್ದರು ಎಂದು ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದಾರೆ.

ಇಲ್ಲಿ ಇವರ ಸಂಬಂಧಿಕರು ಯಾರೂ ವಾಸವಾಗಿಲ್ಲ. ನೆರೆಹೊರೆಯವರೊಂದಿಗೆ ಈ ಕುಟುಂಬ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಇವರು ನಡೆಸುತ್ತಿದ್ದ ಟಿವಿ ಇನ್ಫೊಟೆಕ್ ಎಂಬ ಉದ್ಯಮ ನಷ್ಟದಲ್ಲಿ ಇತ್ತು.ಸಾಲದ ಹೊರೆ ಇತ್ತು.ಹೀಗಾಗಿ ಕುಟುಂಬದ ನಾಲ್ವರು ಸದಸ್ಯರಿಗೆ ಮೊದಲು ಗುಂಡಿಕ್ಕಿ, ನಂತರ ಓಂಕಾರಪ್ರಸಾದ್ ತಮಗೆ ತಾವೆ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕುಟುಂಬದವರ ಆಕ್ರಂದನ
ಗುಂಡ್ಲುಪೇಟೆಯಲ್ಲಿ ಗುಂಡಿಕ್ಕಿ ಕುಟುಂಬ ಸದಸ್ಯರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಓಂಕಾರ ಪ್ರಸಾದ್ ಅವರು ರಕ್ಷಣೆಗೆ 4 ಮಂದಿ ಬೌನ್ಸರ್ಗಳನ್ನು ಇಟ್ಟುಕೊಂಡಿದ್ದರು ಎಂದು ಮನೆಯ ಸಮೀಪದ ನಿವಾಸಿಯೊಬ್ಬರು ತಿಳಿಸಿದರು.

ಎರಡು ಪಾಳಿಯಲ್ಲಿ ತಲಾ ಇಬ್ಬರು ಬೌನ್ಸರ್ಗಳಂತೆ ಒಟ್ಟು ನಾಲ್ವರು ಬೌನ್ಸರ್ಗಳು ರಕ್ಷಣೆಗೆ ಇದ್ದರು.ವಾಕಿಂಗ್ಗೆ ಹೋಗುವಾಗಲೂ ಬೌನ್ಸರ್ಗಳು ಇರುತ್ತಿದ್ದರು ಎಂದು ಹೇಳಿದ್ದರು.
ಓಂಕಾರ ಪ್ರಸಾದ್ ಅವರು 4 ದಿನಗಳ ಹಿಂದೆಯೆ ಹಾಲು ಹಾಕುವುದನ್ನು ಬೇಡ ಎಂದು ಹೇಳಿದ್ದರು.ಎಲ್ಲ ಹಣವನ್ನೂ ನೀಡಿದ್ದರು ಎಂದು ಹಾಲು ಹಾಕುತ್ತಿದ್ದ ಪ್ರಭಾಕರ್ ತಿಳಿಸಿದರು.

ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು.ಸಾಕಷ್ಟು ಹಣ ನೀಡುತ್ತಿದ್ದರು ಎಂದು ಅವರು ಹೇಳಿದರು.ಸೊಪ್ಪು ಮಾರಾಟ ಮಾಡುವ ಮಹಿಳೆಯೊಬ್ಬರಿಗೆ 4 ದಿನಗಳ ಹಿಂದೆಯೆ ಒಂದು ಸಾವಿರ ಹಣ ನೀಡಿದ್ದರು ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಗಣಿ ಉದ್ಯಮ
ಓಂಕಾರ ಪ್ರಸಾದ್ ಅವರು ಗಣಿ ಉದ್ಯಮವೊಂದನ್ನು ನಡೆಸುತ್ತಿದ್ದರು ಎಂದು ನಿವಾಸಿಯೊಬ್ಬರು ಹೇಳಿದರು.ಸ್ಥಳಕ್ಕೆ ಎಚ್.ಡಿ ಆನಂದ ಕುಮಾರ್ ಎಎಸ್ಪಿ ಅನಿತಾ ಹದ್ದಣ್ಣವರ್ ಭೇಟಿ ನೀಡಿ ಪರಿಶೀಲಿಸಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ