ತ್ರಿವಿಕ್ರಮ ಜೋಶಿ ಅವರನ್ನು ಎಫ್‌ಕೆಸಿಸಿಐ ವ್ಯವಸ್ಥಾಪನಾ ಸಮಿತಿಗೆ ವಿಶೇಷ ಆಹ್ವಾನಕರಾಗಿ ನೇಮಿಸಲಾಗಿದೆ

ಬೆಂಗಳೂರು ಆ 13: ಎಫ್‌ಕೆಸಿಸಿಐ ಅಧ್ಯಕ್ಷ ಸಿ ಆರ್ ಜನಾರ್ಧನ ಅವರು ಶ್ರೀ ತ್ರಿವಿಕ್ರಮ್ ಜೋಶಿಯನ್ನು ಎಫ್‌ಕೆಸಿಸಿಐನ ವ್ಯವಸ್ಥಾಪನಾ ಸಮಿತಿಗೆ 2019-20ನೇ ಸಾಲಿನ ವಿಶೇಷ ಆಹ್ವಾನಿಯಾಗಿ ನೇಮಕ ಮಾಡಿದ್ದಾರೆ. ಶ್ರೀ ತ್ರಿವಿಕ್ರಮ್ ಜೋಶಿ ಅವರು ಪ್ರಸ್ತುತ ರಾಯಚೂರು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಉದ್ಯಮಿಗಳಾದ ಶ್ರೀ ತ್ರಿವಿಕ್ರಮ್ ಜೋಶಿ ಬಿಜೆಪಿಯ ಪರವಾಗಿ ರಾಯಚೂರು ನಗರದಿಂದ 2013 ರಲ್ಲಿ ಸ್ಪರ್ಧಿಸಿ ಸೋತಿದ್ದರು. ಅವರು ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ ಮತ್ತು ಇತ್ತೀಚಿಗೆ ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ರಾಷ್ಟ್ರೀಯ ಸಹ- ಸಂಚಾಲಕರಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ