ಪಲ್ಟಾನ್ ಪಲ್ಟಿ ಹೊಡೆಸಿ ಗೆಲುವನ್ನ ಕಿತ್ತುಕೊಂಡ ಸ್ಟೀಲ್ಸರ್ಸ್

ಪುಣೇರಿ ಪಲ್ಟಾನ್ ಹಾಗೂ ಹರಿಯಾಣ ಸ್ಟೀಲರ್ ನಡುವಿನ ಪ್ರೋ ಕಬಡ್ಡಿ ಲೀಗ್ ಪಂದ್ಯ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದೆ. ರೋಚಕ ಹೋರಾಟದಲ್ಲಿ ಹರಿಯಾಣ ಸ್ಟೀಲರ್ 34-24 ಅಂಕಗಳ ಅಂತರದಲ್ಲಿ ಪುಣೇರಿ ಪಲ್ಟಾನ್ ತಂಡವನ್ನು ಮಣಿಸಿದೆ. ಈ ಮೂಲಕ 7ನೇ ಆವೃತ್ತಿ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಮೊದಲಾರ್ಧದಲ್ಲಿ ಮೊದಲು ಅಂಕ ಖಾತೆ ತೆರೆದ ಪುಣೇರಿ ಪಲ್ಟಾನ್, 7 ನಿಮಿಷದ ವರೆಗೆ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಅಷ್ಟೇ ವೇಗದಲ್ಲಿ ಹರ್ಯಾಣ ಸ್ಟೀಲರ್ ಮುನ್ನಡೆ ಪಡೆಯಿತು. ಹೀಗಾಗಿ ಮೊದಲಾರ್ಧದಲ್ಲಿ ಹರ್ಯಾಣ 22-10 ಅಂಕಗಳ ಮುನ್ನಡೆ ಪಡೆಯಿತು.

ದ್ವಿತಿಯಾರ್ಧದಲ್ಲೂ ಹರ್ಯಾಣ ಮುನ್ನಡೆ ಕಾಯ್ದುಕೊಂಡಿತು. ಇತ್ತ ಪುಣೇರಿ ಅಂಕ ಗಳಿಗೆ ಮುನ್ನಡೆ ತಂದುಕೊಡಲಿಲ್ಲ. ಅಂತಿಮ ಹಂತದಲ್ಲಿ ಹರ್ಯಾಣ ಸ್ಟೀಲರ್ 34-24 ಅಂತರದಲ್ಲಿ ಗೆಲುವು ಸಾಧಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ