ಅತೃಪ್ತ ಶಾಸಕರಿಗೆ ನಿರಾಳತೆ ನೀಡಿದ ಸುಪ್ರೀಂಕೋರ್ಟ್ ತೀರ್ಪು

ನವದೆಹಲಿ,ಜು.17– ನಾಳಿನ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗಿದೆ ಎಂದು ಸುಪ್ರೀಂ ಕೋರ್ಟ್‍ನಲ್ಲಿ ಅತೃಪ್ತರ ಪರ ವಾದ ಮಂಡಿಸಿದ್ದ ವಕೀಲ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹ್ಟಗಿ, ಇಂದಿನ ತೀರ್ಪು ಅತೃಪ್ತ ಶಾಸಕರಿಗೆ ನಿರಾಳತೆ ನೀಡಿದೆ. ವಿಶ್ವಾಸಮತ ಹಿನ್ನಲೆಯಲ್ಲಿ ನಡೆಯುವ ವಿಧಾನಸಭೆ ಕಲಾಪಕ್ಕೆ ಹಾಜರಾಗಲೇ ಬೇಕು ಎಂಬ ನಿಯಮ ಇವರಿಗೆ ಅನ್ವಯವಾಗುವುದಿಲ್ಲ. ಕಲಾಪಕ್ಕೆ ಹಾಜರಾಗುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಅತೃಪ್ತ ಶಾಸಕರಿಗಿದೆ ಎಂದು ಹೇಳಿದ್ದಾರೆ.

ಶಾಸಕರಿಗೆ ನೀಡಲಾಗಿರುವ ವಿಪ್ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ದೃಷ್ಟಿಯಲ್ಲಿ ನೋಡುವುದಾದರೆ ದೋಸ್ತಿ ಪಕ್ಷಗಳು ಜಾರಿ ಮಾಡಿರುವ ವಿಪ್ ಅತೃಪ್ತ ಶಾಸಕರಿಗೆ ಅನ್ವಯಿಸುವುದಿಲ್ಲ. ಅಂತೆಯೇ ಶಾಸಕರ ರಾಜೀನಾಮೆ ವಿಚಾರದ ಸಂಪೂರ್ಣ ಜವಾಬ್ದಾರಿ ಸ್ಪೀಕರ್ ಅವರ ಮೇಲಿದ್ದು, ಅವರ ನಿರ್ಣಯವೇ ಅಂತಿಮವಾಗಿರುತ್ತದೆ. ರಾಜೀನಾಮೆ ಕುರಿತ ಯಾವುದೇ ನಿರ್ಧಾರಕ್ಕೆ ಅವರು ಬದ್ಧರು ಎಂದು ರೋಹ್ಟಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ