ಪಶ್ಚಿಮ ಬಂಗಾಳ ಹಿಂಸಾಚಾರ :ರೈಲುಗಳ ಒಡಾಟ ಅಸ್ತವ್ಯಸ್ತ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಟ್ಪಾರ ಹಾಗೂ ಕಾಕಿನಾರ ಪ್ರದೇಶಗಳಲ್ಲಿ ಹೊಸದಾಗಿ ಹಿಂಸಾಚಾರಗಳು ನಡೆದಿವೆ. ದುಷ್ಕರ್ಮಿಗಳು ಬಟ್ಪಾರದ ಮುನಿಸಿಪಾಲಿಟಿ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. 2 ಗುಂಪುಗಳು ಪ್ರದೇಶದ ವಿವಿಧೆಡೆ ಮನಸೋ ಇಚ್ಛೆ ಬಾಂಬ್‍ಗಳನ್ನು ಬಳಸಿ ದಾಳಿ ನಡೆಸಿವೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಉದ್ರಿಕ್ತಗೊಂಡ ಸ್ಥಳೀಯ ಜನರು ತಕ್ಷಣವೇ ಶಾಂತಿ ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ಕಾಕಿನಾರ ರೈಲು ನಿಲ್ದಾಣದ ಬಳಿ ರೈಲುಗಳ ಹಳಿಗಳನ್ನು ಅಡ್ಡಗಟ್ಟಿದ್ದಾರೆ. ಇದರ ಪರಿಣಾಮ ಶೀಲ್ಡಾ ಪ್ರಮುಖ ವಿಭಾಗದಲ್ಲಿ ಸಂಚರಿಸುವ ರೈಲುಗಳ ಒಡಾಟ ಅಸ್ತವ್ಯಸ್ತಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ