ಹಣದುಬ್ಬರ ಪ್ರಮಾಣ ಇಳಿಕೆ

4 ಜೂನ್ ತಿಂಗಳಲ್ಲಿ ಸಗಟು ಬೆಲೆ ಆಧರಿತ ಹಣದುಬ್ಬರ ಪ್ರಮಾಣ ಸತತ 2ನೆಯ ತಿಂಗಳಾದ ಜೂನ್‍ನಲ್ಲಿ ಇಳಿಕೆ ಪ್ರವೃತ್ತಿಯಲ್ಲಿದೆ. ಸತತ 23 ತಿಂಗಳುಗಳಲ್ಲಿ ಅತ್ಯಂತ ಕಡಿಮೆ ಶೇಕಡ 2.2ರಷ್ಟು ಹಣದುಬ್ಬರ ದಾಖಲಾಗಿದೆ. ತರಕಾರಿಗಳು, ಇಂಧನ ಹಾಗೂ ವಿದ್ಯುತ್ ಉತ್ಪನ್ನಗಳ ಬೆಲೆ ಇಳಿಕೆಯ ಪರಿಣಾಮ ಹಣದುಬ್ಬರ ಕುಸಿತ ಕಂಡಿದೆ. ಮೇ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರ ಪ್ರಮಾಣ ಶೇಕಡ 2.45ರಷ್ಟಿತ್ತು. ಕಳೆದ ವರ್ಷದ ಜೂನ್ ತಿಂಗಳಲ್ಲಿ ಹಣದುಬ್ಬರ 5.68ರಷ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ