ಸರ್ಕಾರ ಕ್ರಿಮಿನಲ್‍ಗಳಿಗೆ ಶರಣಾಗಿದೆಯೇ?

ನವದೆಹಲಿ, ಜೂ. 29- ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‍ಗಳು ಮುಕ್ತರಾಗಿ ಓಡಾಡುತ್ತ ಇಷ್ಟ ಬಂದ ರೀತಿ ದುಂಡಾವರ್ತಿ ಅನುಸರಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉತ್ತರಪ್ರದೇಶದಲ್ಲಿ ಕ್ರಿಮಿನಲ್‍ಗಳ ಸ್ವೇಚ್ಛಾಚಾರ ವರ್ತನೆ ನಡೆಯುತ್ತಿದ್ದು, ಸರ್ಕಾರ ಇದ್ದು, ಇಲ್ಲದಂತಾಗಿದೆ. ಸರ್ಕಾರವು ಕ್ರಿಮಿನಲ್‍ಗಳಿಗೆ ಶರಣಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ