ಭಾರತ,ಪಾಕ್ ವಿಶ್ವಯುದ್ಧ: ಟೀಂ ಇಂಡಿಯಾ ಅಭಿಮಾನಿಗಳಿಗೆ ಗೇಲ್ ಸರ್‍ಪ್ರೈಸ್

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ರೋಚಕ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಪಾಕಿಸ್ತಾನ ಅಭಿಮಾನಿಗಳ ನಡುವೆ ಭಾರಿ ರೋಚಕತೆ ಮನೆ ಮಾಡಿದೆ. ಅತ್ತ ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಸಹ ಇದರಿಂದ ಹೊರತಾಗಿಲ್ಲ. ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜಗಳ ವರ್ಣಗಳನ್ನು ಹೊಂದಿರುವ ವಿಶೇಷ ಡ್ರೆಸ್ ಧರಿಸಿರುವ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ವಿಶ್ವಕಪ್ ಟ್ವಿಟರ್ ಪುಟದಲ್ಲಿ ಈ ಬಗ್ಗೆ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಇದು ಏಳನೇ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದೆ. ಈ ಹಿಂದಿನ ಆರು ಪಂದ್ಯಗಳಲ್ಲೂ ಭಾರತವೇ ಗೆಲುವು ದಾಖಲಿಸಿತ್ತು. ಅಷ್ಟೇ ಯಾಕೆ ಎಲ್ಲ ಹಂತದಲ್ಲೂ ಸಮತೋಲಿತ ತಂಡವನ್ನು ಹೊಂದಿರುವ ವಿರಾಟ್ ಕೊಹ್ಲಿ ಪಡೆ ಇಲ್ಲೂ ಫೇವರಿಟ್ ಎನಿಸಿಕೊಂಡಿದೆ. ತಮ್ಮ ಇನ್‌ಸ್ಟಾಂ ಪುಟದಲ್ಲೂ ಚಿತ್ರವನ್ನು ಹಂಚಿಕೊಂಡಿರುವ ಗೇಲ್, ಭಾರತ ಹಾಗೂ ಪಾಕಿಸ್ತಾನ ತಂಡಕ್ಕೆ ಪ್ರೀತಿ ಹಾಗೂ ಗೌರವವನ್ನು ತೋರಿದ್ದಾರೆ. ಅಲ್ಲದೆ ಸೆಪ್ಟೆಂಬರ್ 20ರಂದು ತಮ್ಮ ಬರ್ತ್ ಡೆ ಡ್ರೆಸ್ ಇದಾಗಿತ್ತು ಎಂಬುದನ್ನು ಉಲ್ಲೇಖಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ